ನಿನ್ನ ಆರಾಧನೆಯನ್ನು ಕುರಿತು ಒಮ್ಮೆ ಆಲೋಚನೆ ಮಾಡು ಸ್ನೇಹಿತನೆ.! (My Friend, Think about your Worship)


ನಿನ್ನ ಆರಾಧನೆಯನ್ನು ಕುರಿತು ಒಮ್ಮೆ ಆಲೋಚನೆ ಮಾಡು ಸ್ನೇಹಿತನೆ.!
(My Friend, Think about your Worship)


ಪರಿಶುದ್ಧರಾಗಿರುವುದಕ್ಕೆ ಕರೆಯಲ್ಪಟ್ಟವರೆಲ್ಲರಿಗೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನನ್ನ ವಂದನೆಗಳು....

ನೀನು ಯಾವ ಉಪದೇಶ ಅನುಸಾರವಾಗಿ (ಬೋಧನೆ) ನಡೆದುಕೊಳ್ಳುತ್ತಿದ್ದೀಯೋ ಲೋಕದಲ್ಲಿ ನಿನಗೆ ಸಮಯ
ಇರುವಾಗಲೇ ಪರೀಕ್ಷಿಸಿಕೋ ಅಪೋಸ್ತಲರ ಬೋಧನೆ ನಾ ? ಅಥವಾ ದೈವಗಳ ಬೋಧನೆ ನಾ ? ಎಂದು (.ಕೃ2:42; 2ಕೊರಿಂಥ13:5; 1ತಿಮೊಥೆ4;2).

ನೀನು ನಿಜವಾಗಿ ಯಥಾರ್ಥವಾದಆರಾಧನೆ ಮಾಡುತ್ತಿದ್ದೀಯ? ಅಥವಾ ನಟಿಸುತ್ತಿದಿಯೋ ಅಲೋಚನೆ ಮಾಡು ಸಹೋದರಾ! (ಯೋಹಾನ 4:21-24; ಪ್ರಕಟನೆ3:15-16).

ಯಾವುದೋ ಒಂದು ವಿಧವಾದ ಆರಾಧನೆ ಮಾಡಿ ಇದೇ ದೇವರು ಕೋರುವ ಆರಾಧನೆ ಎಂದು ನೀನು ಅಂದುಕೊಳ್ಳಬಹುದು, ಆದರೆ  ಆರಾಧನೆ ಅಂಗೀಕಾರಕ್ಕೆ ಯೋಗ್ಯವಾದದ್ದುಹೌದೋ ಅಲ್ಲವೋ ಎಂದು ಪರೀಶೀಲನೆ ಮಾಡಿಕೊಳ್ಳುವುದು ಅವಶ್ಯಕತೆ ಇದೆ. ಗಮನಿಸು. (ಮತ್ತಾಯ15:7-9; ಯಅ.ಕೃ 17:23; ಕೊಲೊಸ್ಸಿ2:18; 2:23; ಯೋಹಾನ4:23-24).


1. ನೀನು ಯರ್ಥಾಥವಾದ ಆರಾಧನೆ ಮಾಡುತ್ತಿಲ್ಲ ಎನ್ನುವುದಕ್ಕೆ ಮೊದಲನೇ ಆಧಾರ

   ನೀನು ನಿನ್ನ ದೋಷಗಳನ್ನು, ಪಾಪಗಳನ್ನು, ಇಹಲೋಕ ಪರವಾದ ಸಂತೋಷವನ್ನು, ಲೋಕದ ಮೂಲ ಪಾಠಗಳನ್ನು ಅನುಸರಿಸುವುದೇ(ಯೆಶಾಯ59:2; ರೋಮಾ13:13; ಗಲಾತ್ಯ5:21; 1ಪೇತ್ರ4:3; ಕೊಲೊಸ್ಸಿ2:8,20).


2.ನೀನು ಯರ್ಥಾಥವದ ಆರಾಧನೆಯಲ್ಲಿ ಮಾಡುತ್ತಿಲ್ಲ ಎನ್ನುವುದಕ್ಕೆ ಎರಡನೇ ಆಧಾರ
  
ತಿದ್ದುವಿಕೆಯನ್ನು ಪ್ರೀತಿಸುವ ಸ್ವಭಾವ ಇಲ್ಲದಿರುವುದು ಬರೆಹಾಕಲ್ಪಟ್ಟ ಮನಸಾಕ್ಷಿಯುಳ್ಳವನಾಗಿ ತಪ್ಪುಗಳನ್ನು ಸಮರ್ತಿಸಿಕೊಳ್ಳುವುದೇ (ಯೆಶಾಯ2:2-6; ರೋಮಾ2:15; 1ತಿಮೊಥೆ4:3; ತೀತ1:15).


3.ನೀನು ಯರ್ಥಾಥವಾದ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ಮೂರನೇ ಆಧಾರ

  ನಿನ್ನಲ್ಲಿರುವ ಕೋಪ, ಅನುಮಾನ, ಅಪವಿತ್ರವಾದ ಕೈಗಳಿಂದ ಹಾಕಿದ ಧೂಪ ಅಥವಾ ಪ್ರಾರ್ಥನೆ, ನೀತಿ, ರಕ್ಷಣಾ ವಸ್ತ್ರಗಳಿಲ್ಲದ ಹೃದಯ, ಮನಸ್ಸನ್ನು ದೇವರ ಮೇಲೆ ಕೇಂದ್ರೀಕರಿಸಿಡದೆ ಆರಾಧನೆಯಲ್ಲಿ ಕೂತುಕೊಳ್ಳುದೇ (1ತಿಮೊಥೆ2:8; ಯೆಶಾಯ1:15; ಕೀರ್ತನೆ 132:9,16;141:1-2; ಪ್ರಸಂಗಿ5:1-3 1ಕೊರಿಂಥ1:10;1415; ಎಫೆಸ್ಸಿ4:18).


4.ನೀನು ಯರ್ಥಾಥವಾದ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ನಾಲ್ಕನೇ ಆಧಾರ

  ಅಪೋಸ್ತಲರ ಬೋಧನೆಯ ಹೆಸರಿನಲ್ಲಿ ಕಲ್ಪನಾ ಕಥೆಗಳನ್ನು, ಕಟ್ಟು ಕಥೆಗಳನ್ನು ಲೋಕ ಪರವಾದ ಉದಾಹರಣೆಗಳನ್ನು, ಸ್ತ್ರೀಯರ ನಾಯಕತ್ವದಲ್ಲಿ ಬೋಧನೆ ಮಾಡುವುದು ನಿನ್ನ ಜೊತೆ ವಿಶ್ವಾಸಿಯನ್ನು ಕುರಿತು ಕೆಟ್ಟದಾಗಿ ಅನ್ಯರ ಮಧ್ಯದಲ್ಲಿ ಹಾಗೂ ಸಭೆಯಲ್ಲಿ ಹೇಳುವುದೇ (1ಕೊರಿಂಥಿ14:3; 1ತಿಮೊತಿ2:12; 2ತಿಮೊಥೆ4;1-4).
       * (ಎಚ್ಚರಿಕೆ, ಆಧರಣೆ, ಕ್ಷೇಮಾಭೀವೃದ್ಧಿಯನ್ನುಂಟು ಮಾಡುವ ಸಂದೇಶಗಳಿವುವುದಿಲ್ಲ).


5. ನೀನು ಯರ್ಥಾಥವಾದ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ಐದನೇ ಆಧಾರ
 
ಪ್ರತಿ ಭಾನುವಾರ ಕರ್ತನ ದಿನವನ್ನು ಜ್ಞಾಪಕ ಮಾಡಿಕೊಳ್ಳದೇ ಇರುವುದು, ಕೃತಜ್ಞತೆಯಿಲ್ಲದಿರುವುದು, ಅಜ್ಞಾನವಾಗಿ, ಅಯೋಗ್ಯವಾಗಿ, ಪರೀಕ್ಷಿಸಿಕೊಳ್ಳದೆ ಕರ್ತನ ಭೋಜನದಲ್ಲಿ ಕೈ ಹಾಕುವುದೇ (.ಕೃ20:7; 1ಕೊರಿಂಥ11:17-33).


6. ನೀನು ಯರ್ಥಾಥವಾದ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ಆರನೇ ಆಧಾರ
 
ಯರ್ಥಾಥವಾದ ಆರಾಧನೆಗೆ ಪಾತ್ರನಲ್ಲದ ಬೇರೊಬ್ಬ ವ್ಯಕ್ತಿಯನ್ನು ಆರಾಧಿಸುವದು ಅಥವಾ ಶರೀರಾಸ್ಪದ ಮಾಡಿಕೊಂಡು ವೇಷಧಾರಿಯಾಗಿ ಜೀವಿಸುವುದೇ(ಯೋಹಾನ4:21-24; ಫಿಲಿಪ್ಪಿ3:1-6; ಮತ್ತಾಯ15:7-9).
  *(ಶರೀರಾಸ್ಪದ ಮಾಡಿಕೊಳ್ಳುವುದು ಎಂದರೆ ಅಧಿಕಾರ, ಉದ್ಯೋಗ, ಆದಾಯ ,ಸಂಪಾದನೆ, ಘನತೆ ಗೌರವ, ನನಗೆ ತುಂಬಾ ಅನುಭವವಿದೆ ಎನ್ನುವ ಡಂಭ ಮುಂತಾದವುಗಳು......).


7. ನೀನು ದೇವರನ್ನು ಯರ್ಥಾಥವಾಗಿ ಆರಾಧೆನೆಯನ್ನು  ಮಾಡುತ್ತಿಲ್ಲ ಎನ್ನುವುದಕ್ಕೆ ಏಳನೇ ಆಧಾರ  

ವ್ಯಕ್ತಿಗತವಾಗಿ ಮಾತನಾಡುವವುಗಳನ್ನು ಸಭೆಯಾಗಿ ಮಾತನಾಡಿ ನಿನ್ನ ಸಹೋದರನನ್ನು ಅಗೌರವಪಡಿಸುವ ಕಾರ್ಯಕ್ರಮಗಳೇ (ಮತ್ತಾಯ18:15-18; ಲೂಕ17:3).


8. ನೀನು ದೇವರನ್ನು ಯರ್ಥಾಥವಾಗಿ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ಎಂಟನೇ ಆಧಾರ
 
ನೀನು ಕೇಳಿಸಿಕೊಂಡ ಬೋಧನೆಯಲ್ಲಿ ತಪ್ಪುಗಳಿದ್ದರೂ ಅದನ್ನು ಖಂಡಿಸದೇ ಇರುವುದು, ಎಲ್ಲರ ಮುಂದೆ ಕೆಳಮಟ್ಟಕ್ಕೆ ಇಳಿಯುವೆ ಎಂದು ನೋಡಿ ನೋಡದೇ ಇರುವದೇ (2ತಿಮೊಥೆ4:2;3:16; .ಕೃ2:18,28; ತೀತ2:15).


9. ನೀನು ದೇವರನ್ನು ಯರ್ಥಾಥವಾಗಿ ಆರಾಧನೆಯನ್ನು ಮಾಡುತ್ತಿಲ್ಲ ಎನ್ನುವುದಕ್ಕೆ ಒಂಬತ್ತನೇ ಆಧಾರ  

 ಸ್ವ ನೀತಿಯನ್ನು ಆಧಾರ ಮಾಡಿಕೊಂಡು ತಮಗೆ ಅನುಕೂಲವಾದ ಸಂಗತಿಗಳನ್ನು, ಇಷ್ಟಗಳನ್ನು ಸಭೆಯ ಮೂಲಕ ಮಾಡಿಸಿಕೊಳ್ಳುವದೇ (ರೋಮಾ10:3; 1ಪೇತ್ರ5:3).
     * (ಹೆಚ್ಚಾಗಿ ಮತಶಾಖೆಗಳಲ್ಲಿ ನೋಡಬಹುದು)


10. ನೀನು ದೇವರನ್ನು ಯರ್ಥಾಥವಾಗಿ ಆರಾಧನೆಯನ್ನು  ಮಾಡುತ್ತಿಲ್ಲ ಎನ್ನುವುದಕ್ಕೆ ಹತ್ತನೇ ಆಧಾರ

  ಸತ್ಯ ವಿಷಯವಾದ ಪ್ರೀತಿಯನ್ನು ಅವಲಂಬಿಸದೇ, ವಾಕ್ಯದ ಅನುಭವ ಜ್ಞಾನ ಹೊಂದಿದ ನಂತರವೂ ನಾಯಿ ತಾನು ಕಕ್ಕಿದ್ದನ್ನು ತಿನ್ನುವಂತೆಂಯೂ ಹಂದಿ ಮತ್ತೆ ತಿರುಗಿ ಕೆಸರಿನಲ್ಲಿ ಬಿದ್ದ ಹಾಗೆ ಎಂಬ ಜ್ಞಾನೋಕ್ತಿ  ಹೇಳಿದಂತೆ ಇರುವ ನಿನ್ನ ಸ್ವಭಾವವು/ಆಲೋಚನೇ (2ಪೇತ್ರ2:20-22; 2ಥೆಸಲೋನಿಕ2:9; ಇಬ್ರಿಯ10:26).

ವಂದನೆಗಳು

📖 :తెలుగు అంశము: 📖

Share this

Related Posts

Previous
Next Post »

www.kannada.cockm.in