ಸಭೆ ಎಂದರೇನು ? (Church)


"ಸಭೆ ಎಂದರೇನು" ?

    ಪರಿಶುದ್ಧರಾಗಿರುವುದಕ್ಕೆ ಕರೆಯಲ್ಪಟ ದೇವಜನರೆಲ್ಲರಿಗೂ  ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನನ್ನ ವಂದನೆಗಳು.

: ಸಭೆ ಎಂದರೆ :

◆  ಗ್ರೀಕ್ ಭಾಷೆಯಲ್ಲಿ - Εκκλησία (ekklēsian).
◆  ಲ್ಯಾಟೀನ್ (Latin) ಭಾಷೆಯಲ್ಲಿ - "ecclesia".
◆  ಇಂಗ್ಲೀಷ್ (English) ಭಾಷೆಯಲ್ಲಿ - "A calling Out Off".
◆  ತೆಲುಗು (Telugu) ಬಾಷಯಲ್ಲಿ - "సంఘము"
◆  ಕನ್ನಡ ಭಾಷೆಯಲ್ಲಿ - "ಸಭೆ"


● ekklēsian ಎಂಬ ಗ್ರೀಕ್ ಪದದಿಂದಲೇ Church (ಸಭೆ) ಎಂಬ ಪದವು ಬಂದಿದೆ.
● ekklēsian ಎನ್ನುವುದು ಎರಡು ಪದಗಳ ಸಮ್ಮಿಲನವಾಗಿದೆ.


"A calling Out Off" (ಸಭೆ)ಎಂದರೆ  ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಯೊಳಗೆ ಕರೆಯಲ್ಪಟ್ಟವರು


A). ನೀವು ಕತ್ತಲೆಯೊಳಗಿನಿಂದ ಆಶ್ಚರ್ಯವಾದ ತನ್ನ ಬೆಳಕಿನಲ್ಲಿ ಕರೆಯಲ್ಪಟ್ಟವರು (1ಪೇತ್ರ2:9).
 ● ಕತ್ತಲೆ (ಪಾಪ) ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಅಂದರೆ ಬೆಳಕಿನ ಕಡೆಗೆ (ನೀತಿಗೆ) ಕರೆಯಲ್ಟವರೇ ಸಭೆ

B). ಅಪೊಸ್ತಲರ ಸುವಾರ್ತೆಯಿಂದ ಕರೆಯಲ್ಪಟ್ಟ ಸಮೂಹವೇ ಸಭೆ (2ಥೆಸಲೋನಿಕ2:14).
ಅಪೋಸ್ತಲರು ಪ್ರಕಟಿಸಿದ ಸುವಾರ್ತೆಯಲ್ಲದೆ ಇತರ ಬೋಧನೆಯ ಮೂಲಕ (ದರ್ಶನಗಳು,ಕನಸುಗಳು)   ಕರೆಯಲ್ಪಟ್ಟವರು ನಿಜವಾದ ಬೆಳಕಿನ ಕಡೆಗೆ ಕರೆಯಲ್ಪಟ್ಟವರಲ್ಲ.

C). ಕ್ರಿಸ್ತನ ಯೇಸುವಿನ ರಕ್ತದಿಂದಪುನರುತ್ಥಾನ ಸಂಬಂಧವಾದ ಸ್ನಾನದ ಮೂಲಕ ತೊಳೆಯಲ್ಪಟ್ಟವರೇ (ದೀಕ್ಷಾಸ್ನಾನದ ಮೂಲಕಮತ್ತೊಂದು ಸ್ಥಿತಿಗೆ ಕರೆಯಲ್ಪಟ್ಟವರು ಅಥವಾ ಸಭೆ (ಪ್ರಕಟನೆ1:6; ತೀತ3:5; .ಕೃ22:16)

D). ಅಂಧಕಾರ ಸಂಬಂಧವಾದ ಅಧಿಕಾರಕ್ಕೆ ಒಳಪಟ್ಟ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಅಂದರೆ ಕ್ರಿಸ್ತನ ರಾಜ್ಯವಾಗಿ ಇರುವುದಕ್ಕೆ ಕರೆಯಲ್ಪಟ್ಟವರೇ ಸಭೆ (ಕೊಲೊಸ್ಸೆ1:16).

E). ಸೈತಾನನ ಅಧಿಕಾರದಿಂದ  ದೇವರ ಕಡೆಗೆ ಕರೆಯಲ್ಪಟ್ಟವರೇ ಸಭೆ (.ಕೃ26:18).

F).  ಲೋಕದ ಸಹವಾಸವನ್ನು ಬಿಟ್ಟುತಂದೆಯೊಂದಿಗೆ ಮಗನೊಂದಿಗೆ ಹಾಗೂ ಪರಿಶುದ್ಧನ ಸಹವಾಸಕ್ಕೆ ಕರೆಯಲ್ಪಟ್ಟವರೇ ಸಭೆ (1ಕೊರಿಂಥ1:19; ಯಾಕೋಬ4:4; 1ಯೋಹಾನ1:3).

G). ದೇವರನ್ನು ಪ್ರೀತಿಸಿ ಆತನ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟವರೇ ಸಭೆ (ರೋಮಾ2:28).

H). ದೇವರಿಂದ ವಾಗ್ದಾನವಾಗಿದ್ದ  ನಿತ್ಯ ಬಾಧ್ಯೆತೆಯನ್ನು ಹೊಂದುವುದಕ್ಕೆ ಕರೆಯಲ್ಪಟ್ಟವರೇ ಸಭೆ (ಇಬ್ರಿಯ9:15; ಎಫೆಸ್ಸ1:17.)

I). ಸಭೆಯೆಂಬ ದೇಹಕ್ಕೆ ಆತನೇ (ಕ್ರಿಸ್ತನು) ಶಿರಸ್ಸು (ಕೊಲೊಸ್ಸೆ1:18).

J).  ಸಭೆ ಆತನ (ಕ್ರಿಸ್ತನು) ದೇಹವು (ಸಭೆ) - (ಎಫೆಸ್ಸ1:23).

K). ನಾವೆಲ್ಲರೂ ಒಂದೇ ದೇಹವಾಗಿರುವುದಕ್ಕೆ (ಸಭೆ) ಕರೆಯಲ್ಪಟ್ಟವರೇ ಸಭೆ (1ಕೊರಿಂಥ12:13).

L). ತನ್ನ ಸ್ವರಕ್ತದಿಂದ ಸಂಪಾದಿಸಿಕೊಂಡವರೇ ಸಭೆ (.ಕೃ20:28).

M). ಕ್ರಿಸ್ತನಿಗೆ ಒಳಪಡುವುದಕ್ಕಾಗಿಯೇ ಕರೆಯಲ್ಪಟ್ಟವರೇ ಸಭೆ (ಎಫೆಸ5:25).

N). ಕ್ರಿಸ್ತನಂತಹ ಕುಮಾರರಾಗಿರುವುದಕ್ಕೂ ಪರಿಶುದ್ಧರಾಗಿವುದಕ್ಕೂ ಪರಲೋಕ ಸಂಬಂಧವಾದ ಕೂಗಿಗೆ ಕರೆಯಲ್ಪಟ್ಟವರೇ ಸಭೆ (ಎಫೆಸ1:6; 1ಕೊರಿಂಥ1:3; ಇಬ್ರಿಯ3:1).


[ಎಚ್ಚರಿಕೆ]

● ಸಭೆ ಎಂದರೆ ಭವನವೋ, ಕಟ್ಟಡವೋ ಅಲ್ಲ
● ಸಭೆ ಎಂದರೆ ಮತ ಶಾಖೆಯಲ್ಲ

📢 ಸಭೆ ಎಂದರೆ ಪರಲೋಕ ಸಂಬಂಧವಾದ ಸಂಸ್ಥಾನ

  ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸನಿಂದಲೂ ಕೃಪೆಯೂ ಸಮಧಾನವೂ ನಿಮ್ಮೆಲ್ಲರ ಮೇಲೆ ಇರಲಿ ವಂದನೆಗಳು.

Share this

Related Posts

Previous
Next Post »

www.kannada.cockm.in