ಹಬ್ಬಗಳು (Festivals) |
ಪಸ್ಕ ಹಬ್ಬ
1.ಪಸ್ಕ ಅಂದರೆ ದಾಟಿ ಹೋಗುವುದು ಎಂದರ್ಥ
"ಯೆಹೋವನು ಐಗುಪ್ತ್ಯರನ್ನು ಹತಮಾಡುವದಕ್ಕೆ ದೇಶದ ನಡುವೆ ಹಾದು ಹೋಗುವಾಗ ನಿಮ್ಮ ನಿಮ್ಮ ಮನೇಬಾಗಲಿನ ಮೇಲಣ ಪಟ್ಟಿಯಲ್ಲಿಯೂ ಎರಡು ನಿಲುವು ಕಂಬಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವದಕ್ಕೆ
ಸಂಹಾರಕನನ್ನು
ನಿಮ್ಮ ಮನೆಗಳಲ್ಲಿ ಬರಗೊಡಿಸುವದೇ ಇಲ್ಲ" (ವಿಮೋಚನಾಕಂಡ
12:23).
"ಚೊಚ್ಚಲ
ಮಕ್ಕಳನ್ನು ಸಂಹರಿಸುವವನು ಇಸ್ರಾಯೇಲ್ಯರನ್ನು ಮುಟ್ಟದಂತೆ ಅವನು ಪಸ್ಕವೆಂಬ ಊಟವನ್ನೂ ರಕ್ತಪ್ರೋಕ್ಷಣಾಚಾರವನ್ನೂ ನೇಮಿಸಿದ್ದು ನಂಬಿಕೆಯಿಂದಲೇ" (ಇಬ್ರಿಯ 11:28).
2. ಯಾರು ಆಚರಿಸಬೇಕು..?- (ಇಸ್ರಾಯೇಲರು)
"ಆಗ ಮೋಶೆಯು ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ ಕೂಡ ಕರಸಿ ಅವರಿಗೆ-ನೀವು ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಹಿಂಡಿನಿಂದ ಮರಿಗಳನ್ನು ತೆಗೆದುಕೊಂಡು ಪಸ್ಕ ಹಬ್ಬಕ್ಕೆ ಕೊಯ್ಯಿರಿ" (ವಿಮೋಚನಾಕಂಡ 12:21).
"ಇಸ್ರಾಯೇಲರು ಪಸ್ಕ ಹಬ್ಬವನ್ನು ಅದರ ನೇಮಕ ಕಾಲದಲ್ಲಿಯೇ ಆಚರಿಸಬೇಕು (ವಿಮೋಚನಾ ಕಾಂಡ 12:21).
3.ಯಾಕೆ ಆಚರಿಸಬೇಕು?
"ಇಸ್ರಾಯೇಲ್ಯರು ಐಗುಪ್ತದೇಶದಲ್ಲಿ ವಾಸವಾಗಿದ್ದದ್ದು ನಾನೂರ
ಮೂವತ್ತು ವರುಷ. ನಾನೂರ
ಮೂವತ್ತು ವರುಷಗಳು ಕಳೆದನಂತರ ಅದೇ ದಿವಸದಲ್ಲಿ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಟು
ಹೋದವು. ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಬೇಕು. ಇಸ್ರಾಯೇಲ್ಯರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಈ ಜಾಗರಣೆಯನ್ನು ಮಾಡಬೇಕು" (ವಿಮೋಚನಕಾಂಡ 12:40-42).
"ನೀವು ಆಡುಕುರಿಗಳಲ್ಲಾಗಲಿ ದನಗಳಲ್ಲಾಗಲಿ ಪಸ್ಕದ ಪಶುವನ್ನು ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ಆತನಿಗಾಗಿ ವಧಿಸಬೇಕು. ಅದರೊಂದಿಗೆ ಹುಳಿ
ಹಾಕಿದ ರೊಟ್ಟಿಯನ್ನು ತಿನ್ನಬಾರದು; ಯಾಕಂದರೆ ನೀವು [ರೊಟ್ಟಿಗೆ ಹುಳಿ
ಹಾಕುವದಕ್ಕೆ ಅವಕಾಶವಿಲ್ಲದೆ] ಅವಸರದಿಂದ ಐಗುಪ್ತದೇಶವನ್ನು ಬಿಟ್ಟು
ಬಂದಿರಿ. ಐಗುಪ್ತದೇಶದಿಂದ ನಿಮಗೆ ಬಿಡುಗಡೆಯಾದ ದಿನವು ನಿಮ್ಮ ಜೀವಮಾನವೆಲ್ಲಾ ನೆನಪಿನಲ್ಲಿರುವಂತೆ ನೀವು ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಗಳನ್ನು ಏಳು ದಿವಸಗಳವರೆಗೂ ತಿನ್ನಬೇಕು"(ಧರ್ಮೋಪದೇಶಕಾಂಡ 16:2-3).
4.ಯಾವಾಗ ಆಚರಿಸಬೇಕು? (ಮೊದಲನೇ ತಿಂಗಳಲ್ಲಿ-ಚೈತ್ರಮಾಸದಲ್ಲಿ)
"ನೀವು ಚೈತ್ರಮಾಸದಲ್ಲಿ ಪಸ್ಕ ಹಬ್ಬವನ್ನು ನಿಮ್ಮ ದೇವರಾದ ಯೆಹೋವನಿಗೋಸ್ಕರ ಆಚರಿಸಬೇಕು" (ಧರ್ಮೋಪದೇಶಕಾಂಡ 16:1).
"ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕಹಬ್ಬವಾಗಬೇಕು" (ಯಾಜಕ ಕಾಂಡ 23:5).
5.ಹೇಗೆ ಆಚರಿಸಬೇಕು ?
"ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕಹಬ್ಬವಾಗಬೇಕು. ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳಲ್ಲಿಯೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟ
ಮಾಡಬೇಕು. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ
ಕೂಡಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು. ಏಳು ದಿನಗಳಲ್ಲಿಯೂ ನೀವು ಯೆಹೋವನಿಗೆ ಹೋಮವನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ
ಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು" (ಯಾಜಕಕಾಂಡ 23:5-8).
ಪಂಚಾಶತ್ತಮ ಹಬ್ಬ
"ಯೆಹೋವನು ಮೋಶೆಗೆ ಹೇಳಿದ್ದೇನಂದರೆ -ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದ ನಂತರ ಅಲ್ಲಿನ [ಜವೆಗೋದಿಯ] ಪೈರನ್ನು ಕೊಯ್ಯುವಾಗ ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು. ನೀವು ಅಂಗೀಕಾರವಾಗುವಂತೆ ಅವನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಸಬ್ಬತ್ ನದ ಮಾರಣೆಯ ದಿನದಲ್ಲಿಯೇ ಅದನ್ನು ನಿವಾಳಿಸಬೇಕು. ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರುಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. ಅದರೊಂದಿಗೆ ಮಾಡಬೇಕಾದ ಧಾನ್ಯನೈವೇದ್ಯವು ಯಾವದಂದರೆ ಎಣ್ಣೆ ಬೆರೆತ ಆರು ಸೇರು ಗೋದಿಯ ಹಿಟ್ಟೇ. ಯೆಹೋವನಿಗೆ ಸುವಾಸನೆಯನ್ನುಂಟು ಮಾಡುವದಕ್ಕೆ ಇದನ್ನು ಬೆಂಕಿಯಲ್ಲಿ ಹೋಮ ಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನ
ದ್ರವ್ಯವು ಒಂದುವರೆ ಸೇರು ದ್ರಾಕ್ಷಾರಸ. ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದದ್ದನ್ನು ತಂದು
ಕೊಡುವವರೆಗೂ [ಆ ವರುಷದ ಬೆಳೆಯ] ರೊಟ್ಟಿಯನ್ನಾಗಲಿ ಸುಟ್ಟ ತೆನೆಗಳನ್ನಾಗಲಿ ಹಸಿತೆನೆಗಳನ್ನಾಗಲಿ ತಿನ್ನಲೇಕೂಡದು. ನಿಮಗೂ ನಿಮ್ಮ ಸಂತತಿಯವರಿಗೂ ನಿಮ್ಮ ಎಲ್ಲಾ ನಿವಾಸಸ್ಥಾನಗಳಲ್ಲಿಯೂ ಇದು ಶಾಶ್ವತನಿಯಮ. ಸಬ್ಬತ್ದಿನದ ಮಾರಣೆಯ ದಿನ ಮೊದಲುಗೊಂಡು ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ನಿವಾಳಿಸಿದ ದಿನ ಮೊದಲುಗೊಂಡು ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ ಐವತ್ತು ದಿನಗಳನ್ನು ಲೆಕ್ಕಿಸಬೇಕು. ಏಳನೆಯ ಸಬ್ಬತ್ದಿನದ ಮರುದಿನದಲ್ಲಿ ಯೆಹೋವನಿಗೆ ಹೊಸ ಬೆಳೆಯ ನೈವೇದ್ಯ
ದ್ರವ್ಯವನ್ನು
ಸಮರ್ಪಿಸಬೇಕು. ನಿಮ್ಮ ನಿವಾಸಗಳಿಂದ [ತಂದ ಹಿಟ್ಟಿನಲ್ಲಿ] ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.ಆ ರೊಟ್ಟಿಗಳೊಡನೆ ಒಂದು ವರುಷದ ಪೂರ್ಣಾಂಗವಾದ ಏಳು ಕುರಿಗಳನ್ನೂ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಇವು ಧಾನ್ಯ
ದ್ರವ್ಯದೊಡನೆಯೂ
ಪಾನ ದ್ರವ್ಯದೊಡನೆಯೂ ಅಗ್ನಿ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವ ಸರ್ವಾಂಗ ಹೋಮವಾಗುವವು. ಅದಲ್ಲದೆ ದೋಷ
ಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಸಮಾಧಾನ
ಯಜ್ಞಕ್ಕಾಗಿ ಒಂದು ವರುಷದ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಯಾಜಕನು ಇವುಗಳನ್ನೂ ಪ್ರಥಮ ಫಲದ ರೊಟ್ಟಿಗಳನ್ನೂ ಎರಡು ಕುರಿಗಳನ್ನೂ ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು. ಆ ದಿವಸದಲ್ಲಿ ದೇವಾರಾಧನೆಗಾಗಿ ಸಭೆ ಕೂಡಬೇಕೆಂಬದಾಗಿ ಪ್ರಸಿದ್ಧಪಡಿಸಬೇಕು. ಅದರಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು. ಇದು ನಿಮಗೂ ನಿಮ್ಮ ಸಂತತಿಯವರಿಗೂ ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ" (ಯಾಜಕ ಕಾಂಡ 23:9-22).
ಗಮನಿಸಿ: ಕಾನಾನು ದೇಶದಲ್ಲಿ ಎರಡು ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ
1.ಬಾರ್ಲಿ
2.ಗೋಧಿ
ಈ ಎರಡು ಬೆಳೆಗಳ ಪ್ರಥಮ ಫಲವನ್ನು ಅರ್ಪಿಸಿದ ನಂತರ, ಏಳುವಾರಗಳನ್ನು ಲೆಕ್ಕಿಸಿ ( ಯಾಜಕ ಕಾಂಡ 23:15) ಏಳನೆಯ ವಿಶ್ರಾಂತಿ ದಿನದ ನಂತರದ ದಿನದಲ್ಲಿ ಅಂದರೆ ಐವತ್ತನೇ ದಿನ ಈ ಪಂಚಾಶತ್ತಮ ದಿನವನ್ನು ಇಸ್ರಾಯೇಲರು ಆಚರಿಸುತ್ತಾರೆ (ಯಾಜಕ ಕಾಂಡ 23:16).
ಪರ್ಣ ಶಾಲೆ ಹಬ್ಬ /ಗುಡಾರಗಳ ಹಬ್ಬ
1. ಪರ್ಣ ಶಾಲೆ ಹಬ್ಬವನ್ನೇ ಗುಡಾರಗಳ ಹಬ್ಬ ಎಂದು ಸಹ ಕರೆಯುತ್ತಾರೆ.
2.ಯಾರು ಮಾಡಬೇಕು?
"ಯೆಹೋವನು ಮೋಶೆಗೆ ಹೇಳಿದ್ದೇನಂದರೆ -ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳು ಇವೇ; ಈ ದಿನಗಳಲ್ಲಿ ದೇವಾರಾಧನೆಗಾಗಿ ಸಭೆ
ಕೂಡಬೇಕೆಂಬದಾಗಿ
ಸಾರಬೇಕು" (ಯಾಜಕ ಕಾಂಡ 23:1-2).
"ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲ್ಯರು ಪರ್ಣಶಾಲೆಗಳಲ್ಲಿ ವಾಸಿಸಬೇಕು" (ನೆಹೆಮೀಯ ೮:೧೪).
3.ಯಾಕೆ ಆಚರಿಸಬೇಕು?
"ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದಾಗ ಇಸ್ರಾಯೇಲ್ಯರು ಪರ್ಣಶಾಲೆಗಳಲ್ಲಿ ವಾಸವಾಗಿರುವಂತೆ ಮಾಡಿದೆನೆಂಬದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವದು. ನಾನು ನಿಮ್ಮ ದೇವರಾದ ಯೆಹೋವನು" (ಯಾಜಕ ಕಾಂಡ 23:42).
4.ಯಾವಾಗ ಆಚರಿಸಬೇಕು? (ಏಳನೇ ತಿಂಗಳಲ್ಲಿ - ಆಶ್ವೀಜಮಾಸದಲ್ಲಿ)
"ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು" (ಯಾಜಕ ಕಾಂಡ 23:33-34).
"ಇಸ್ರಾಯೇಲ್ಯರೆಲ್ಲರೂ ಏಳನೆಯ ತಿಂಗಳಾದ ಆಶ್ವೀಜಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು"(1 ಅರಸು 8:2).
5.ಹೇಗೆ ಆಚರಿಸಬೇಕು?
ಯೆಹೋವನು ಮೋಶೆಗೆ ಹೇಳಿದ್ದೇನಂದರೆ -ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಕೂಡಬೇಕು; ಯಾವ ಉದ್ಯೋಗವನ್ನೂ ನಡಿಸಬಾರದು. ಆ ಏಳು ದಿನಗಳಲ್ಲಿಯೂ ನೀವು ಯೆಹೋವನ ಸನ್ನಿಧಿಯಲ್ಲಿ ಹೋಮ
ಮಾಡಬೇಕು. ಎಂಟನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ
ಕೂಡಬೇಕು, ಯೆಹೋವನ ಸನ್ನಿಧಿಯಲ್ಲಿ ಹೋಮ
ಮಾಡಬೇಕು. ಅದು ಸಭೆ
ಕೂಡುವ ದಿನವಾದದರಿಂದ ಅದರಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು. ಯೆಹೋವನು ನೇಮಿಸಿರುವ ಸಬ್ಬತ್ ದಿನಗಳ ಹೊರತಾಗಿ ಮೇಲೆ ಕಂಡವುಗಳೇ ಯೆಹೋವನ ಹಬ್ಬದ ದಿನಗಳು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆ
ಕೂಡುವಂತೆ ನೀವು ಪ್ರಕಟಿಸಬೇಕು. ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಸಮರ್ಪಿಸಬೇಕಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ಸರ್ವಾಂಗಹೋಮ, ನೈವೇದ್ಯದ್ರವ್ಯ, ಸಮಾಧಾನಯಜ್ಞ, ಪಾನದ್ರವ್ಯ ಇವುಗಳನ್ನೂ ತಂದು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು.
ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ ಮತ್ತು ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಯೆಹೋವನು ನೇಮಿಸಿದ [ಪರ್ಣ
ಶಾಲೆಗಳ] ಜಾತ್ರೆಯನ್ನು ಏಳು ದಿನಗಳವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿಯೂ ಎಂಟನೆಯ ದಿನದಲ್ಲಿಯೂ ಯಾವ ಕೆಲಸವನ್ನೂ ಮಾಡದೆ ಸಂಪೂರ್ಣ
ವಿರಾಮದಿಂದಿರಬೇಕು ಮೊದಲನೆಯ ದಿನದಲ್ಲಿ ಶ್ರೇಷ್ಠ ವೃಕ್ಷದ ಹಣ್ಣುಗಳನ್ನೂ ಖರ್ಜೂರ ಮರದ ಗರಿಗಳನ್ನೂ ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನೂ ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆಯುವ ನೀರವಂಜಿ ಚಿಗುರುಗಳನ್ನೂ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಏಳು ದಿನಗಳು ಸಂಭ್ರಮವಾಗಿರಬೇಕು. ಹೀಗೆ ಪ್ರತಿ ವರುಷದಲ್ಲಿಯೂ ಏಳು ದಿನಗಳವರೆಗೆ ಈ ಉತ್ಸವವನ್ನು ಆಚರಿಸಬೇಕು; ನಿಮಗೂ ನಿಮ್ಮ ಸಂತತಿಯವರಿಗೂ ಇದು
ಶಾಶ್ವತನಿಯಮ; ಏಳನೆಯ ತಿಂಗಳಿನಲ್ಲಿ ಇದನ್ನು ಆಚರಿಸಬೇಕು" (ಯಾಜಕ ಕಾಂಡ 23:33-42).
"ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲ್ಯರು ಪರ್ಣಶಾಲೆಗಳಲ್ಲಿ ವಾಸಿಸಬೇಕು; ಈ ನಿಯಮದ ಪ್ರಕಾರ ಆ ಪರ್ಣಶಾಲೆಗಳಿಗಾಗಿ ಜನರು ಗುಡ್ಡಕ್ಕೆ ಹೋಗಿ ಒಲೀವ, ಕಾಡು ಒಲೀವ, ಸುಗಂಧ, ಖರ್ಜೂರ ಮುಂತಾದ ಮರಗಳ ದಟ್ಟವಾದ ಎಲೆಗಳುಳ್ಳ ಕೊಂಬೆಗಳನ್ನು ತರುವ ಹಾಗೆ ಅವರ ಎಲ್ಲಾ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿಯೂ ಡಂಗುರದಿಂದ ಪ್ರಕಟಿಸಬೇಕು ಎಂಬದಾಗಿ ಬರೆದಿರುವ ಶಾಸನವು ಮೋಶೆಗೆ ಯೆಹೋವನಿಂದ ದೊರಕಿದ ಧರ್ಮಶಾಸ್ತ್ರದಲ್ಲಿ ಸಿಕ್ಕಿತು. ಈ ಆಜ್ಞಾನುಸಾರವಾಗಿ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ತಮ್ಮ ತಮ್ಮ ಅಂಗಳ
ಮಾಳಿಗೆಗಳಲ್ಲಿಯೂ
ದೇವಾಲಯದ ಪ್ರಾಕಾರಗಳಲ್ಲಿಯೂ ನೀರು ಬಾಗಲು, ಎಫ್ರಾಯೀಮ್ ಬಾಗಲು ಇವುಗಳ ಮುಂದಣ ಬೈಲುಗಳಲ್ಲಿಯೂ ಪರ್ಣಶಾಲೆಗಳನ್ನು ಮಾಡಿಕೊಂಡರು. ನೂನನ ಮಗನಾದ ಯೆಹೋಶುವನ ಕಾಲದಿಂದ ಆವರೆಗೂ ಇಸ್ರಾಯೇಲ್ಯರು ಹೀಗೆ ಮಾಡಿದ್ದಿಲ್ಲ. ಸೆರೆಯಿಂದ ತಿರಿಗಿ ಬಂದ ಸರ್ವಸಮೂಹದವರಾದರೋ ಪರ್ಣಶಾಲೆಗಳನ್ನು ಮಾಡಿಕೊಂಡು ಅವುಗಳಲ್ಲಿ ವಾಸಿಸುತ್ತಾ ಬಹು ಸಂತೋಷಪಟ್ಟರು. ಎಜ್ರನು ಮೊದಲನೆಯ ದಿನದಿಂದ ಕಡೆಯ ದಿನದವರೆಗೆ ಪ್ರತಿದಿನವೂ ದೇವರ ಧರ್ಮಶಾಸ್ತ್ರವನ್ನು [ಜನರಿಗೋಸ್ಕರ] ಪಾರಾಯಣ ಮಾಡುತ್ತಿದ್ದನು. ಏಳು ದಿನಗಳವರೆಗೂ ಜಾತ್ರೆ ನಡೆಯಿತು. ನೇಮದ ಪ್ರಕಾರ ಎಂಟನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ
ಕೂಡಿತು"(
ನೆಹೆಮೀಯ 8:14-18).
Note : ಸಹೋದರರೇ... ಮೇಲೆ ಮೂರೂ ಹಬ್ಬಗಳನ್ನು ಇಸ್ರಾಯೇಲ್ ಜನರ ಮುಖ್ಯವಾದ ಹಬ್ಬಗಳು ಈ ಹಬ್ಬಗಳನ್ನು ಅವರು ಆಚರಿಸಬೇಕು ಎಂದು ದೇವರು ಸ್ವತಃ ಆಜ್ಞಾಪಿಸಿದ್ದನು. ಒಂದೊಂದು ಹಬ್ಬಕ್ಕೂ ಹೆಸರನ್ನು ಸೂಚಿಸಿದ್ದಾನೆ ಮತ್ತು ಯಾವ ತಿಂಗಳಲ್ಲಿ ಯಾವ ದಿನದಿಂದ ಎಷ್ಟು ದಿನಗಳ ವರೆಗೂ ಆಚರಿಸಬೇಕು, ಆಯಾ ದಿನಗಳಲ್ಲಿ ಏನೇನು ಮಾಡಬೇಕು ಏನು ಮಾಡಬಾರದು ಎಂಬ ವಿಷಯಗಳೆಲ್ಲವನ್ನು ಕುರಿತು ತನ್ನ ಧರ್ಮಾಶಾಸ್ತ್ರದಲ್ಲಿ ಲಿಖಿತ ರೂಪದಲ್ಲಿ ಬರೆಸಿ ಅವರಿಗೆ ಕೊಟ್ಟಿದ್ದಾನೆ.
ಹೊಸ ಒಡಂಬಡಿಕೆಯಲ್ಲಿ..,ಯೆಹೂದ್ಯರಂತಹ ನೇಮಕ ಕಾಲಗಳು ಇಲ್ಲ
"ಪೂರ್ವಕಾಲದಲ್ಲಿ ನೀವು ದೇವರ ಜ್ಞಾನವಿಲ್ಲದವರಾಗಿ ದೇವರಲ್ಲದವುಗಳಿಗೆ ಅಧೀನರಾಗಿದ್ದಿರಿ. ಈಗಲಾದರೋ ನೀವು ದೇವರನ್ನು ತಿಳುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ತಿಳುಕೊಂಡಿದ್ದಾನೆ. ಹೀಗಿರಲಾಗಿ ನೀವು ಕೆಲಸಕ್ಕೆ ಬಾರದ ದರಿದ್ರಬಾಲಬೋಧೆಗೆ ಮತ್ತೂ ಅಧೀನರಾಗಬೇಕೆಂದು ಅಪೇಕ್ಷಿಸಿ ಪುನಃ ಅದಕ್ಕೆ ತಿರುಗಿಕೊಳ್ಳುವದು ಹೇಗೆ? ನೀವು ಆಯಾ ದಿನಗಳನ್ನೂ ಮಾಸಗಳನ್ನೂ ಉತ್ಸವಕಾಲಗಳನ್ನೂ ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸುತ್ತೀರಿ. ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ" (ಗಲಾತ್ಯ 4:8-11).
"ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ" (ಕೊಲೊಸ್ಸೆ
2:17).
"ನಿಜ" ಕ್ರೈಸ್ತರಿಗೆ ಹಬ್ಬಗಳು ಇದಾವ ?
ಹೌದು ನಿಜ ಕ್ರೈಸ್ತರಿಗೆ ಒಂದೇ ಒಂದು ಹಬ್ಬವಿದೆ. ಅದೇ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿ ಹಬ್ಬ" ಇದು ನಾವು
ವಾರಕ್ಕೆ ಒಂದು ಸಾರಿ ಅಂದರೆ ಭಾನುವಾರ ಮಾತ್ರವೇ ಆಚರಿಸುವುದಕ್ಕೆ ಆಜ್ಞಾಪಿಸಲಾಗಿದೆ. ಈ ಹಬ್ಬವನ್ನು ಪ್ರತಿ ಭಾನುವಾರ ಆಚರಿಸುತ್ತಿದ್ದಿಯಾ?? ನಿನ್ನ ವಿಶ್ವಾಸವು ವಾಕ್ಯಾನುಸಾರವಾದದ್ದು ಆಗಿದ್ದರೆ ಈ ಎರಡು "ಪಸ್ಕ ಹಬ್ಬ" ಮತ್ತು "ಕರ್ತನ ಭೋಜನ
" ಅಂಶಗಳನ್ನು ಕ್ಲಿಕ್ ಮಾಡಿ ಓದಿ ಸತ್ಯವನ್ನು ಗ್ರಹಿಸಿಕೊಳ್ಳುವುದಕ್ಕೆ ಹಿಂಜರಿಯಬೇಡ ಸಹೋದರಾ!
"ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೆ ಹುಳಿಯನ್ನು ತೆಗೆದು
ಹಾಕಿ ಹೊಸ ಕಣಿಕದಂತಾಗಿರ್ರಿ. ಯಾಕಂದರೆ ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ" (1
ಕೊರಿಂಥ 5:7-8).
"ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿವಸಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸದಲ್ಲಿ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿವಸಗಳಿದ್ದೆವು. ವಾರದ ಮೊದಲನೆಯ ದಿವಸದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಕೂಡಿ
ಬಂದಾಗ ಮರುದಿನ ಹೋರಾಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಸರಿಹೊತ್ತಿನವರೆಗೂ ಉಪನ್ಯಾಸವನ್ನು ನಡಿಸಿದನು" (ಅ.ಕೃ
20:6-7).
ಕೆಲವು ಶತಮಾನಗಳಿಂದ ನಾಮಕಾರ್ಥ ಕ್ರೈಸ್ತರು ಎಂಬುವವರು ಆಚರಿಸುವ ಈ ಕ್ರಿಸ್ಮಸ್, happy new year, Plam
Sunday, Good Friday, Easter, ಸಮಾಧಿಗಳ ಹಬ್ಬ etc., ಎಂಬುವಂತಹ ಹಬ್ಬಗಳನ್ನು ಆಚರಿಸಬೇಕು ಎಂದು ಪರಿಶುದ್ಧ ಗ್ರಂಥದಲ್ಲಿ ಯಾವುದೇ ರೀತಿಯ ಆಧಾರಗಳಿಲ್ಲ. ಪರಿಶುದ್ಧ ಗ್ರಂಥಕ್ಕೆ ಒಳಪಡದೆ ಮನುಷ್ಯರು ಕಲ್ಪಿಸಿದ ಪದ್ಧತಿಗಳನ್ನು, ವಾಕ್ಯಕ್ಕೆ ವಿರುದ್ಧವಾದ ಆಧಾರಗಳನ್ನು ತೋರಿಸುತ್ತಾ ಪರಾಂಪಾರ್ಯಾಚರಗಳಿಗೆ ಅವಕಾಶ
ಮಾಡಿಕೊಡುತ್ತಾ
ಇರುವಂತವರಿಗೆ
ಸತ್ಯವೇದವು ಈ ರೀತಿಯಾಗಿ ಹೇಳುತ್ತದೆ.
"ಅವನಿಗೆ ತನ್ನ ತಂದೆ
ತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ. ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ -ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ" (ಮತ್ತಾಯ 15:6-9).
ಹಳೆ ಒಡಂಬಡಿಕೆ ಕಾಲದಲ್ಲಿ..., ಪರಮ ದೇವರು ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದಾಗ ಸ್ಪಷ್ಟವಾಗಿ, ಪ್ರತ್ಯೇಕವಾಗಿ ಹಬ್ಬಗಳ ಕುರಿತಾಗಿ ಹೇಳಿದ್ದನು ಆದರೆ ಕ್ರೈಸ್ತರು ಎನ್ನುವವರಿಗೆ (ನೀನು ಮಾಡುವ) ಹಬ್ಬಗಳಿಗೆ ಮೇಲೆ ಹೇಳಿದಂತಹ ರೀತಿಯಲ್ಲಿ "ಯಾವ ತಿಂಗಳು? ಯಾವ ದಿನ? ಯಾವ ದಿನದಿಂದ ಯಾವ ದಿನದ ವರೆಗೂ ಆಚರಿಸಬೇಕು? ಮತ್ತು ಆಯಾ ದಿನಗಳಲ್ಲಿ ಏನೇನು ಮಾಡಬೇಕು? ಏನೇನು ಮಾಡಬಾರದು? ಎಂದು" ಈ ವಿಷಯಗಳೆಲ್ಲವನ್ನು ನೀನು ಮತ್ತು ನಿನ್ನ ನಿನ್ನ ಕುಟುಂಬದವರು ಆಚರಿಸುತ್ತಿರುವ ಹಬ್ಬಗಳನ್ನು ಕುರಿತು ಪರಿಶುದ್ಧ
ಗ್ರಂಥದಲ್ಲಿ ಯಾಕೆ ತಿಳಿಸಲಾಗಿಲ್ಲ?? ನಿನ್ನನ್ನು ನೀನೆ
ಪ್ರಶ್ನಿಸಿಕೊಂಡು ಆಲೋಚನೆ ಮಾಡು!
ಸತ್ಯವೇದದಲ್ಲಿ ವಾಸ್ತವಗಳು ಇಷ್ಟು
ಸ್ಪಷ್ಟಾವಾಗಿ
ಕಾಣಿಸುತ್ತಿದ್ದರೂ ನಂದು ನನಗೆ ಎಂದು ನನ್ನಿಷ್ಟ ಎಂದು ನೀವು
ಅಂದು ಅಂದು
ಕೊಂಡರೆ ನಿನಗೆ ಇಷ್ಟ ಬಂದಂತೆ ನೀನು ಜೀವಿಸು, ಆದರೆ ಪವಿತ್ರಾತ್ಮನು ಬರೆಸಿಕೊಟ್ಟಿರುವ ಲೇಖನೆಗಳಿಗೆ ನಿನ್ನ ಸ್ವಂತ ಮಾತುಗಳನ್ನು ಸೇರಿಸಬೇಡ.
"ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಪವಿತ್ರಾತ್ಮನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಇಹದಲ್ಲಾಗಲಿ ಪರದಲ್ಲಾಗಲಿ ಕ್ಷಮಿಸಲ್ಪಡುವದಿಲ್ಲ" (ಮತ್ತಾಯ
12:32).
ವಂದನೆಗಳು
ಇಂತಿ ನಿಮ್ಮ ಆತ್ಮೀಯ
ಸಹೋ
ಈಶ್ವರ್