ಕೊಡಿರಿ ಆಗ ನಿಮಗೂ ಕೊಡಲ್ಪಡುವುದು (ಲೂಕ6:38) |
ಕರ್ತನಲ್ಲಿ ಸಹೋದರ
ಸಹೋದರಿಯರಿಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನನ್ನ ವಂದನೆಗಳು
ಈ ಪ್ರಸ್ತುತ
ದಿನಗಳಲ್ಲಿ ಅನೇಕರು ಅಂದರೆ ಕ್ರೈಸ್ತರು ದೇವರಿಗೆ ಕೊಡುವುದರ ವಿಷಯದಲ್ಲಿ ಸರಿಯಾದ ಅವಗಹನೆ
ಇಲ್ಲದೆ ಇರವವರು ಕೆಲವರಾದರೆ, ಇನ್ನೂ ಕೆಲವರು ದೇವರಿಗೆ ಕೊಡುವ
ವಿಷಯದಲ್ಲಿ ಎಲ್ಲವನ್ನು ತಿಳಿದವರಾಗಿದ್ದರೂ ದೇವರಿಗೆ ಕೊಡದೇ ಇದ್ದಾರೆ. ಇನ್ನೂ ಕೆಲವರು ದೇವರಿಗೆ
ಕೊಡುವುದನ್ನು ಕೊಡದೆ ದೇವರಿಂದ ಕದ್ದು ಕೊಳ್ಳುವವಾಗಿದ್ದಾರೆ. ದೇವರಿಂದ ಕದ್ದು
ಶಾಪಗ್ರಸ್ತರಾಗಿದ್ದರೆ “ನರಮನುಷ್ಯನು ನನ್ನಿಂದ ಕದ್ದು ಕೊಳ್ಳಬಹುದೇ
ನೀನು ನನ್ನಿಂದ ಕದ್ದು ಕೊಳ್ಳುವವರಾಗಿದ್ದೀರಿ.....ಶಾಪಗ್ರಸ್ತರಾಗಿದ್ದೀರಿ”(ಮಲಾಕಿ3:8-10) ಹಾಗದರೆ ಸಹೋದರರೆ ದೇವರು ಈ ಕೊಡುವುದರ
ವಿಷಯದಲ್ಲಿ ಏನು ಹೇಳುತ್ತಿದ್ದಾನೆ? ಯಾಕೆ ಕೊಡಬೇಕು? ದೇವರಿಗೆ ಎಷ್ಟು ಕಡಬೇಕು? ಕೊಡುವುದರಿಂದ ನಮಗೆ ಬರುವಂಥ ಲಾಭ
ಅಥವಾ ಆರ್ಶೀವಾದಗಳೇನು? ಎಂಬ ಪ್ರಶ್ನೆಗೆ ದೇವರು ಏನು ಹೇಳುತ್ತಿದ್ದಾನೆ
ಎಂದು ಸತ್ಯವೇದದಿಂದ ಪರಿಶೀಲಿಸೋಣ.
A). "ಕೊಡುವುದರ ವಿಷಯದಲ್ಲಿ ಸತ್ಯವೇದವು ಏನು
ಹೇಳುತ್ತದೆ"..?
ದೇವರು ನಮ್ಮಿಂದ ಕಾಣಿಕೆಯನ್ನು
ಬಯಸುವವನಾಗಿದ್ದಾನೆ ಹಾಗಾದರೆ ಈ ಕಾಣಿಕೆ ಕೊಡುವುದರ ವಿಷಯಕ್ಕೆ ಸಂಬಂಧಿಸಿದಂತೆ ಸತ್ಯವೇದದಿಂದ
ಕೆಲ ಉದಾಹರಣೆಗಳನ್ನು ನೋಡೋಣ.
1). ಅಬ್ರಹಾಮನು ತಾನು ಗೆದ್ದು ತಂದದ್ದರಲ್ಲಿ ಹತ್ತನೇ ಒಂದು
ಭಾಗವನ್ನು ದೇವರಿಗೆ ಸಲ್ಲಿಸಿದನು (ಆದಿ14:18).
2). ಅಬ್ರಹಾಮನು ಕೊಟ್ಟಂತ ದಶಮಾಂಶವನ್ನು ದೇವರು ಇಸ್ರಾಯೇಲರಿಗೆ
ಆಜ್ಞೆಯನ್ನಾಗಿ ನೇಮಿಸಿದನು (ಯಾಜಕ 27:30-31 ಅರಣ್ಯ ಕಾಂಡ18:20-24).
3). ಯಾಕೋಬನು ಸಹ ತನ್ನ ಆಸ್ತಿಯಲ್ಲಿ ಹತ್ತನೇ ಒಂದು ಭಾಗವನ್ನು
ಕೊಡುವೆನೆಂದು ಹರಕೆ ಮಾಡಿಕೊಂಡನು (ಆದಿ28:20-22).
4). ಕಾಯಿನನು ಸಹ ತನ್ನ ಹೊಲದ ಬೆಳೆಯಲ್ಲಿ ಕೆಲವನ್ನು ದೇವರಿಗೆ
ಕಾಣಿಕೆಯಾಗಿ ಸಮರ್ಪಿಸಿದನು.ಅದೇ ರೀತಿ ಹೇಬೆಲನು ಸಹ ತನ್ನ ಕುರಿಗಳ ಹಿಂಡಿನಿಂದ ಚೊಚ್ಚಲ
ಕುರಿಗಳನ್ನು ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಆದರೆ ಕಾಯಿನನ ಕಾಣಿಕೆ ಮೆಚ್ಚಲಿಲ್ಲ ಹೇಬೆಲನ
ಕಾಣಿಕೆಯನ್ನು ಮೆಚ್ಚಿದನು (ಆದಿ4:3-4).
5). ದೇವರು ಮೋಶೆ ಮುಖಾಂತರ ಇಸ್ರಾಯೇಲರ ಅರಣ್ಯ ಪ್ರಯಾಣದಲ್ಲಿ
ಗುಡಾರವನ್ನು ನಿರ್ಮಿಸಲು ಕಾಣಿಕೆಯನ್ನು ತರಬೇಕೆಂದು ಹೇಳಲು ಅನೇಕರು ಮನ ಪೂರ್ವಕವಾಗಿ ತಮ್ಮ
ಕಾಣಿಕೆಗಳನ್ನು ತಂದರು ಹೇಳಿದಕ್ಕಿಂತ ಹೆಚ್ಚಾದ ಕಾಣಿಕೆಗಳನ್ನು ಸಮರ್ಪಿಸಿದರು (ವಿಮೋಚನಾ
ಕಾಂಡ35:4-9;36:1-7).
6). ದಾವೀದನು ಸಹ ಮನ ಪೂರ್ವಕವಾಗಿ ಉದಾರ ಹಸ್ತದಿಂದ ತನ್ನ ಸ್ವಂತ
ಸ್ವತ್ತಿನಿಂದ ದೇವಾಲಯ ಕಟ್ಟಲು ಕಾಣಿಕೆಗಳನ್ನು ಸಮರ್ಪಿಸಿದನು ಇದನ್ನು ಕೇಳಿದ ಇಸ್ರಾಯೇಲ್ ಗೋತ್ರ
ಕುಟುಂಬದ ಪ್ರಧಾನರೂ ಸಹಸ್ರಾಧಿಪತಿಗಳೂ ಅರಸನ ಕೆಲಸದ ಮುಖ್ಯಸ್ಥರೂ ದೇವಾಲಯ ಕಟ್ಟಲು ಮನ
ಪೂರ್ವವಕವಾಗಿ ಕಾಣಿಕೆಗಳನ್ನು ಸಮರ್ಪಿಸಿದರು. (1ಪೂ.ವೃ29:1-9).
ಹೀಗೆ ಅನೇಕರು
ದೇವರಿಗೆ ಮನ ಪೂರ್ವಕವಾಗಿ ದೇವರಿಗೆ ಕಾಣಿಕೆಗಳನ್ನು ಸಮರ್ಪಿಸಿದರು.
ಹೊಸ ಒಡಂಬಡಿಕೆಯಲ್ಲಿ ಸಹ ಉದಾರ ಹಸ್ತದಿಂದ ದೇವರಿಗೆ ಕಾಣಿಕೆಗಳನ್ನು
ಸಮರ್ಪಿಸಿದರು:
1). ಒಬ್ಬ ಬಡ ವಿಧವೆ ಬಡತನದಲ್ಲಿದ್ದರೂ ತನ್ನ ಜೀವನವನ್ನೆಲ್ಲಾ
ಕೊಟ್ಟು ಬಿಟ್ಟಳು (ಲೂಕ21:1-4).
2). ಒಬ್ಬ ಸುಂಕದವನು ಸಹ ತಾನು ಸಂಪಾದಿಸುವ ಎಲ್ಲದರಲ್ಲಿಯೂ
ಹತ್ತರಲ್ಲೊಂದು ಪಾಲನ್ನು ಕೊಡುವೆನೆಂದು ಹೇಳಿದನು. (ಲೂಕ18:12-13).
3). ಮೆಕೆದೋನ್ಯದ ಸಭೆಯವರು ಸಹ ತಮ್ಮ ಶಕ್ತಿಯನ್ನು ಮೀರಿ ದೇವರಿಗೆ
ಕಾಣಿಕೆಯನ್ನು ಸಮಪಿಸಿದರು (1ಕೋರಿಂಥ8:1-4)
4). ಅಖಾಯ ಮತ್ತು ಕೊರಿಂಥದ ಸಭೆಯವರು ಸಹ ದೇವರಿಗೆ ಧರ್ಮ
ದ್ರವ್ಯವನ್ನು ಕೊಡಲು ಸಿದ್ಧವಾಗಿದ್ದರು (2ಕೋರಿಂಥ9:1-2).
5). ಪೌಲನು ಕೊರಿಂಥದಲ್ಲಿರುವ ದೇವರ ಸಭೆಗೆ ನಿಮ್ಮ ಸಂಪಾದನೆಯ
ಮೇರೆಗೆ ದೇವರಿಗೆ ಕಾಣಿಕೆಗಳನ್ನು ಸಮರ್ಪಿಸಬೇಕೆಂದು ಗಲಾತ್ಯ ಸಭೆಗೆ ಹೇಳಿಕೊಟ್ಟ ಕ್ರಮದಂತೆ
ಮಾದರಿಯನ್ನು ಇವರಿಗೂ ತಿಳಿಯಪಡಿಸಿದನು ಸಭೆಯವರು. (1ಕೋರಿಂಥ16:1-4).
6). ಫಿಲಿಪ ಸಭೆಯವರು ಸಹ ತಮ್ಮ ಧರ್ಮದ್ರೌವ್ಯವನ್ನು ಪೌಲನ
ಕೊರತೆಯನ್ನು ನೀಗಿಸುವದರ ಮೋಲಕ ಕಾಣಿಕೆಯನ್ನು ಸಮರ್ಪಿಸಿದರು. (ಫಿಲಿಪ್ಪ4:14-16).
ಮೇಲಿನ
ವಚನಗಳನ್ನು ನಾವು ಗಮನಿಸಿದರೆ ಅವರು ಮನಪೂರ್ವಕವಾಗಿ ಧಾರಾಳವಾಗಿ ದೇವರಿಗೆ ಕಾಣಿಕೆಗಳನು
ಸಮರ್ಪಿಸಿದರು ಎಂದು ನಮಗೆ ಕಂಡುಬರುತ್ತದೆ. ಹಾಗಾದರೆ ನಾವು ಈ ರೀತಿಯಾಗಿ ದೇವರಿಗೆ
ಕಾಣಿಕೆಗಳನ್ನು ಕೊಡುತ್ತಿದ್ದೇವಾ ಇಲ್ಲವೋ ಎಂದು ಆಲೋಚಿಸಿ...? ಆದರೆ
ಒಂದು ವಿಷಯನ್ನು ನಾವು ಗಮನದಲ್ಲಿಟ್ಟು ಕೊಳ್ಳಬೇಕು ದೇವರು ನಮ್ಮಿಂದ ಕಾಣಿಕೆಗಳನ್ನು ಆಶಿಸುತ್ತಾನೆಂದರೆ
ಆತನು ಏನು ಇಲ್ಲದವನಲ್ಲ. ನಾವು ಪ್ರೀತಿಯಿಂದ ಕೊಟ್ಟಂತ ಕಾಣಿಕೆಗಳು ಆಶೀರ್ವಾದಕರವಾಗಿ ತಿರಿಗಿ
ನಮ್ಮ ಬಳಿಗೆ ಬರುತ್ತವೆ ಎಂದು ನಾವು ಗ್ರಹಿಸಿ ಆತನಿಗೆ ಕಾಣಿಕೆಗಳನ್ನು ಕೊಡಬೇಕು. ಮತ್ತು ನಮ್ಮ
ನಂಬಕೆಯನ್ನು ಪರೀಕ್ಷಿಸುವುದಕ್ಕೆ ಆತನು ನಮ್ಮಿಂದ ಕಾಣಿಕೆಗಳನ್ನು ಕೋರುತ್ತಿದ್ದಾನೆಂದು
ಗ್ರಹಿಸಬೇಕು. (1ಪೂ.ವೃ29:11-12).
B). "ದೇವರಿಗೆ ಎಷು ಕಾಣಿಕೆಯನ್ನು ಕೊಡಬೇಕು"?
ಹಳೆ ಒಡಂಬಡಿಕೆಯಲ್ಲಿ ದೇವರು
ನಿಮ್ಮ ಎಲ್ಲಾ ಸಂಪಾದನೆಯಲ್ಲಿ ದಶಮಾಂಶವನ್ನು ದೇವರಿಗೆ ಸಮರ್ಪಿಸಬೇಕು ಎಂದು ದೇವರು ಹೇಳಿದ್ದಾನೆ.
(ಯಾಜಕ27:30-31ಅರಣ್ಯ ಕಾಂಡ18:20-24).
“ಪ್ರತಿಯೊಬ್ಬನಿಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ
ಶಕ್ತ್ಯನುಸಾರ ಕೊಡಬೇಕು (ಧರ್ಮೋ16:17;26:12-13).
“ನನ್ನ ಪ್ರಿಯ ಸಹೋದರರೇ, ಮೋಸ
ಹೋಗಬೇಡಿರಿ.ಎಲ್ಲಾ ಒಳ್ಳೇ ದಾನಗಳು ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ
ಮೂಲ ಕಾರಣನಾದವನಿಂದ ಇಳಿದು ಬರುತ್ತವೆ” (ಯಾಕೋಬ1:17).
ಹೊಸ ಒಡಂಬಡಿಕೆಯಲ್ಲಿ ದೇವರು
ನಿಮ್ಮ ಸಂಪಾದನೆಯ ಮೇರೆಗೆ ನೀವು ಕಾಣಿಕೆಯನ್ನ ಸಂತೋಷದಿಂದ ನಮ್ಮ ಹೃದಯದಲ್ಲಿ ನಿರ್ಣಯಿಸಿ
ಕೊಂಡಿರುವ ಪ್ರಕಾರ ಕೊಡಬೇಕೆಂದು ಹೊಸ ಒಡಂಬಡಿಕೆಯಲ್ಲಿ ದೇವರು ಹೇಳಿದ್ದಾನೆ. “ಆದರೆ ಸಲ್ವವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನ
ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು
ಎಂದು ತಳಿದುಕೊಳ್ಳಿರಿ. ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ;
ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು. ದೇವರು ಸಕಲವಿಧವಾದ
ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾಗಿರುವುದರಿಂದ ನೀವು ಎಲ್ಲಾ
ವಿಷಯಗಳಲ್ಲಿ ಪರಿಪೂರ್ಣವುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು” (2ಕೋರಿಂಥ9:6-9).
ಗಮನಿಸಿ :...ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಬೇಕು ಅಂದರೆ ನಮ್ಮ
ಹೃದಯದಲ್ಲಿ ನಿರ್ಣಯಿಸಿಕೊಳ್ಳುವುದು ಹಳೆ ಒಡಂಬಡಿಕೆಯಲ್ಲಿ ಹೇಳಿರುವುದಕ್ಕಿಂತ ಕಡಿಮೆ ನಾವು
ನಿರ್ಣಯಿಸಿ ಕೊಳ್ಳಬಾರದು ‘ಹಳೆ ಒಡಂಬಡಿಕೆಗಿಂತ ಹೊಸ
ಒಡಂಬಡಿಕೆ ಶ್ರೇಷ್ಟವಾದ್ದರಿಂದ ಅದಕ್ಕಿಂಲೂ ಹೆಚ್ಚಾಗಿ ನಿರ್ಣಯಿಸಿ ಕೊಂಡು ದೇವರಿಗೆ
ಕಾಣಿಕೆಯನ್ನು ಮನಪೂರ್ವಕವಾಗಿ ಸಲ್ಲಿಸಬೇಕು’.
C).ಯಾಕೆ ದೇವರಿಗೆ ಕಾಣಿಯನ್ನು ಕೊಡಬೇಕು?
● ‘ನಮ್ಮ ಪ್ರತಿಯೊಂದು ಕೊರತೆಗಳು ನೀಗಸಬೇಕಾದರೆ’ ದೇವರಿಗೆ ಕಾಣಿಕೆಗಳನ್ನು ಸಮರ್ಪಿಸಬೇಕು (ಫಿಲಿಪ್ಪ4:19).
● ‘ಆತನ ಆಲಯದಲ್ಲಿ ಆಹಾರ ಶೂನ್ಯವಾಗದೆ’ ಇರಬೇಕಾದರೆ
ದೇವರಿಗೆ ಕಾಣಿಕೆಯನ್ನು ಕೊಡಬೇಕು (ಮೀಕಾ:3:10).
● ದೇವರಿಂದ
ಆಶೀರ್ವಾದಗಳನ್ನು ನಾವು ಹೊಂದಬೇಕಾದರೆ ದೇವರಿಗೆ ಕಾಣಿಕೆಗಳನ್ನು ಸಲ್ಲಿಸಬೇಕು.
● “ನಾನು ಪರಲೋಕದ
ದ್ವಾರಗಳನ್ನು ತೆರೆದು ಹಿಡಿಯಲಾಗದಷ್ಟುಸುವರಗಳನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ
ಪರೀಕ್ಷಿಸಿ” (ಮಲಾಕಿ3:10)
●“ದೇವರು
ಸಕಲವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾಗಿರುವುದರಿಂದ ನೀವು ಎಲ್ಲಾ ವಿಷಯಗಳಲ್ಲಿ
ಪರಿಪೂರ್ಣವುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು” (2ಕೋರಿಂಥ9:6-9).
● “ಕೊಡಿರಿ ಆಗ ನಿಮಗೂ ಕೊಡಲ್ಪಡುವುದು; ಜಡಿದು
ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು”(ಲೂಕ6:38)
● “ನನ್ನ ಪ್ರಿಯ ಸಹೋದರರೇ,
ಮೋಸ ಹೋಗಬೇಡಿರಿ.ಎಲ್ಲಾ ಒಳ್ಳೇ ದಾನಗಳು ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ
ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದು ಬರುತ್ತವೆ”(ಯಾಕೋಬ1:17).
● ನಾವು ಎಲ್ಲದರಲ್ಲಿಯೂ ಯಾವಾಗಲೂ ಸಮೃದ್ಧಿಯುಳ್ಳವರಾಗಿ ಉನ್ನತವಾದ
ಪ್ರತಿ ಕಾರ್ಯಗಳನ್ನು ನಾವು ಮಾಡಲು ಬೇಕಾದ ಕೃಪೆಯನ್ನು ವಿಸ್ತರಿಸಬೇಕಾದರೆ ನಾವು ಕಾಣಿಕೆಗಳನ್ನು
ಸಮರ್ಪಿಸಬೇಕು.
● ನಾವು ದೇವರನ್ನು ಎಷ್ಟು ಪ್ರೀತಿಸುತ್ತೇವೆ ಎಂದು ತಿಳಿಯಲು ನಮ್ಮ
ಪ್ರೀತಿಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸಬೇಕು
● ಬಡತನದಲ್ಲಿರುವವರ ಅವಶ್ಯಕತೆಗಳನ್ನು ಪೂರೈಸಲು ಕಾಣಿಕೆಗಳನ್ನು
ಸಮರ್ಪಿಸಬೇಕು (ಧರ್ಮೋ15:7-11).
● ತಂದೆ ತಾಯಿ ಇಲ್ಲದವರೂ ಅನಾತರೂ ಪರದೇಶಿಗಳೂ ವಿಧವೆಯರಿಗೆ
ಸಹಾಯವನ್ನು ಮಾಡುವುದಕ್ಕೆ ಕಾಣಿಕೆಗಳನ್ನು ಸಮರ್ಪಿಸಬೇಕು ಹೀಗೆ ಮಾಡುವುದರಿಂದ ದೇವರು ನಮ್ಮ
ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು(ಧಮೋ14:28-29;26:12).
● “ನೀವು ದುಡಿದು ಬಲವಿಲ್ಲದವರಿಗೆ ಉಪಕಾರ ಮಾಡಬೇಕು; ಮತು ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯ”(ಅ.ಕೃ20:35)
● ಸುವಾರ್ತಿಕನ ಪೋಷಣೆಗೋಸ್ಕರ ಕಾಣಿಕೆಗಳನ್ನು ಸಮರ್ಪಿಸಬೇಕು (1ಕೋರಿಂಥ9:14 ಗಲಾತ್ಯ6:6).
ಸಭೆ ಕ್ಷೇಮಾಭಿವೃದ್ಧಿಗೋಸ್ಕರ ಮತ್ತು ಸುವಾರ್ತೆ
ಅಭಿವೃದ್ಧಿಗೋಸ್ಕರ ಕಾಣಿಕೆಯನ್ನು ಸಮರ್ಪಿಸಬೇಕು
ಸಹೋದರರೆ ದೇವರಿಂದ ವಿಸ್ತಾರವಾದ ಆಶೀರ್ವಾದಗಳನ್ನು ಹೊಂದಿಕೊಳ್ಳುತ್ತಿರುವ ನಾವು
ತಿರಿಗಿ ಕೃತಜ್ಞತೆಯಿಂದ ದೇವರಿಗೆ ಏನು ಕೊಡುತ್ತಿದ್ದೇವೆ ಎಂದು ತಿಳಿದವರಾಗಿ ಆತನಿಗೆ ಕಾಣಿಕೆಗಳನ್ನು
ಕೊಡುವುದರ ವಿಷಯದಲ್ಲಿ ಹಿಂದೇಟು ಹಾಕ ಬಾರದು. ದೇವರು ನಮ್ಮಿಂದ ಏನು ಕೇಳುತ್ತಿದಾನೆ ನಮ್ಮ
ಸಂಪಾದನೆಯಲ್ಲಿ ಒಂದು ಭಾಗವನ್ನು ಒಂದು ಭಾಗವನ್ನು
ಕೊಡುವುದಕ್ಕಾಗದಷ್ಟು ಕಷ್ಟವೇನು ಅಲ್ಲ.
ಆದ್ದರಿಂದ ‘ಈ ಕ್ಷಣವೇ ಮನಸ್ಸು ಬದಲಾಯಿಸಿಕೊಂಡು’ ಆತನಿಗೆ ಕೊಡಬೇಕಾದ ವಿಷಯದಲ್ಲಿ ಜಾಗ್ರತೆಯುಳ್ಳವರಾಗಿ, ಆತನು ನಮ್ಮಿಂದ ಏನು ಕೋರುವವನಾಗಿದ್ದಾನೋ ಅವುಗಳನ್ನು ಕೊಟ್ಟರೆ ಆತನು ವಿಸ್ತಾರವಾಗಿ
ಸಂತೋಷದಿಂದ ಹಿಡಿಯಲಾಗದಷ್ಟು ವಿಸ್ತಾರವಾದ ಆರ್ಶೀವಾದಗಳನ್ನು ಸುರಿಸುವನೆಂದು ನಂಬಿ ಆತನನ್ನು
ಘನಪಡಿಸಬೇಕೆಂದು (ಮಹಿಮೆ ಪಡಿಸಬೇಕು) ನನ್ನನು ನಾನು ಪ್ರೀತಿಯಿಂದ ಹೆಚ್ಚರಿಸಿಕೊಳ್ಳುತ್ತಾ....
ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
“ಕೊಡಿರಿ ಆಗ
ನಿಮಗೂ ಕೊಡಲ್ಪಡುವುದು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ
ಅತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು” (ಲೂಕ6:38).
“ಇದಲ್ಲದೆ ಪರೋಪಕಾರವನ್ನು ಧರ್ಮಮಾಡುವುದನ್ನೂ ಮರೆಯಬೇಡಿರಿ;
ಇವೇ ದೇವರಿಗೆ ಸಮರ್ಪವಾದ ಯಜ್ಞಗಳು” (ಇಬ್ರಿಯ13:16).
“ನೀವು ದಶಮಾಶವನ್ನು ಯಾವತ್ತು ನನ್ನ ಭಂಡಾರಕ್ಕೆ ತೆಗೆದುಕೊಂಡು
ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು
ಹಿಡಿಯಲಾಗದಷ್ಟುಸುವರಗಳನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿ” (ಮಲಾಕಿ3:10).
ವಂದನೆಗಳು
ಇಂತಿ ನಿಮ್ಮ ಆತ್ಮೀಯ.,
ಸಹೋ.ಈಶ್ವರ್
1 comments:
comments888casino.com Baccarat - Worrione
Reply888casino.com Baccarat. Baccarat. 바카라사이트 888casino.com bet365 Baccarat. 바카라 사이트 888casino.com Baccarat. 888casino.com Baccarat. 888casino.com Baccarat.