ದೇವರ ವಾಕ್ಯ (The Word of God)


ದೇವರ ವಾಕ್ಯ 
(The Word of God)

ಸಹೋದರ ಸಹೋದರಿಯರೆಲ್ಲರಿಗೂ....ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನನ್ನ ಹೃದಯ ಪೂರ್ವಕವಾದ ವಂದನೆಗಳು....

ಇಂದಿನ ಕ್ರೈಸ್ತವ ಕಾಲದಲ್ಲಿ ಅನೇಕ ಸಹೋದರರು ದೇವರ ವಾಕ್ಯವನ್ನು ಸರಿಯಾಗಿ ಪರಿಶೀಲನೆ ಮಾಡದೆ ವಾಕ್ಯವನ್ನು ಅವರಿಗೆ ಅನುಕೂಲವಾದರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾ ಪರಿಶುದ್ಧವಾದ ದೇವರ ಮಾತುಗಳನ್ನು ಇಹಲೋಕ ಸಂಬಂಧವಾದ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಉಪಯೋಗಿಸುತ್ತಾ ಮನುಷ್ಯರ ಮೂಲಕ ಹೊಗಳಿಸಿಕೊಳ್ಳುವುದಕ್ಕೆ ಎಷ್ಟೋ ತಾಪತ್ರಯ ಪಡುತ್ತಾ ದೇವರ ವಾಕ್ಯವನ್ನು ಆಳವಾವಾಗಿ ಸರಿಯಾದ ವಿಧಾನದಲ್ಲಿ ಅರ್ಥಮಾಡಿಕೊಳ್ಳದೆ ಮೇಲೆ ಮೇಲೆ ದೇವರ ವಾಕ್ಯಗಳನ್ನು ಬೋಧಿಸುತ್ತಾ ದೇವರಿಗೆ ವಿರೋಧವಾಗಿ ನಡೆದು ಕೊಳ್ಳುತ್ತಿದ್ದಾರೆ. ಆದರೆ ಪ್ರಿಯರೇ ನಾವು ನಿಜವಾಗಿ ದೇವರ ವಾಕ್ಯವನ್ನು ಪ್ರೀತಿಸಿ ಅನುದಿನವೂ ಲೇಖನೆಭಾಗಗಳನ್ನು  ಗ್ರಹಿಸಿದರೆ ಮೊದಲು ನಮ್ಮ ಲೋಪಗಳನ್ನು ನಾವು ಸರಿಪಡಿಸಿಕೊಂಡು, ಮತ್ತೊಬ್ಬರಿಗೆ ಬೋಧಿಸಬಹುದು.  ಆದರೆ ದಿನದಲ್ಲಿ ಅನೇಕ ಕ್ರೈಸ್ತವ ಸಹೋದರರು ಅವರ ಲೋಪಗಳನ್ನು ಸರಿಪಡಿಸಿಕೊಳ್ಳದೇ ಇದ್ದಾರೆಂದರೆ ಸತ್ಯವೇದವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಬಹುದು.

ನೀನು ನಿಜವಾಗಿ ದೇವರ ವಾಕ್ಯವನ್ನು ಪ್ರೀತಿಸಿದರೆ ನಿನ್ನ ಸಹೋದರನನ್ನು  ಪ್ರೀತಿಸುತ್ತೀಯಾ (1ಯೋಹಾನ2:5) ಸಮಧಾನದಿಂದಿರುವಿ (ಕೀರ್ತನೆ119:165) ನೆಮ್ಮದಿಯೊಂದಿಗಿರುವಿ (ಕೊಲೊಸ್ಸೆ3:15), ಪ್ರೀತಿ ಪೂರ್ವಕವಾದ ಹೆಚ್ಚರಿಕೆಗಳನ್ನು ಮಾಡಿವಿ (ಯೆಹೆಜ್ಕೇ¯3:18-20; ಎಫೆಸ4:15). ಸತ್ಯವನ್ನು ಇದ್ದದ್ದು ಇದ್ದಂತೆ ಗ್ರಹಿಸುವಿ (ಎಫೆಸ4:21). ಸತ್ಯವೇದವು ಸಹ ಇದೇ ರೀತಿಯಾಗಿ ಸಮಾಧಾನವನ್ನು ಹೇಳುತ್ತದೆ


1) “ದೇವರ ವಾಕ್ಯವು ನಮ್ಮ ಹೃದಯದ ಆಲೋಚನೆಗಳನ್ನೂ,ಉದ್ದೇಶಗಳನ್ನೂ ವಿವೇಚಿಸುವಂಥದು (ಇಬ್ರಿಯ4:12).

2) “ದೇವರ ವಾಕ್ಯವು ನಮಗೆ ಆದರಣೆಯನ್ನು ಉಂಟು ಮಾಡುತ್ತದೆ (ರೋಮಾ15:4).

3) “ದೇವರ ವಾಕ್ಯವು ಕ್ರಿಸ್ತನಲ್ಲಿ  ಸಹವಾಸವನ್ನು ಉಂಟು ಮಾಡುತ್ತದೆ (ಲೂಕ8:21).

4) “ದೇವರ ವಾಕ್ಯವು ನಮ್ಮಲ್ಲಿ ವಿವೇಕವನ್ನು ಹುಟ್ಟಿಸುತ್ತದೆ (ಕೀರ್ತನೆ111:10).

5) “ದೇವರ ವಾಕ್ಯವು ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ.(ಲೂಕ11:28).      

6) “ದೇವರ ವಾಕ್ಯವು ನಮ್ಮನ್ನು ಜ್ಞಾನವಂತರನ್ನಾಗಿ ಮಾಡುತ್ತದೆ (ಮತ್ತಾಯ7:24).

7) “ದೇವರ ವಾಕ್ಯವು ಪಾಪದಿಂದ ನಮ್ಮನ್ನು ರಕ್ಷಿಸುತ್ತದೆ (ಕೀರ್ತನೆ119:11).

8) “ದೇವರ ವಾಕ್ಯವು ನಮಗೆ ಸುಕ್ಷೇಮವನ್ನುಂಡು ಮಾಡುತ್ತದೆ (ಜ್ಞಾನೋಕ್ತಿ3:1-2).

9) “ದೇವರ ವಾಕ್ಯವು ನಮ್ಮ ರಕ್ಷಣೆ ಅಭಿವೃದ್ಧಿಗೆ ಸಹಾಯ  ಮಾಡುವುದು (1ಪೇತ್ರ2:2-3).

10) “ದೇವರ ವಾಕ್ಯಕವು ಸಮಸ್ತ ಕಲ್ಮಷದಿಂದ ಬಿಡುಗಡೆಯನ್ನುಂಟು ಮಾಡುವುದು (ಯಾಕೋಬ1:21).

11) “ದೇವರ ವಾಕ್ಯವು ಜ್ಞಾನಕ್ಕೆ ಮೂಲವಾಗಿದೆ (ಕೀರ್ತನೆ119:130).

12) “ದೇವರ ವಾಕ್ಯವು ನಮಗೆ ದೀಪವೂ ಬೆಳಕೂ ಆಗಿದೆ (ಕೀರ್ತನೆ119:105).

13) “ದೇವರ ವಾಕ್ಯವು ನಮ್ಮಲ್ಲಿ ಕಾರ್ಯಸಿದ್ಧಿಯನ್ನು ತರುತ್ತದೆ (1ಥೆಸಲೋನಿಕ2:13).

14) “ದೇವರ ವಾಕ್ಯವು ನಮಗೆ ಆಪತ್ಕಾಲದಲ್ಲಿ ಆದರಣೆಯನ್ನು ನೀಡುತ್ತದೆ (ಕೀರ್ತನೆ119:50).

15) “ದೇವರ ವಾಕ್ಯವು ನಾವು ಕೆಟ್ಟ ದಾರಿಯಲ್ಲಿ ಹೋಗದಂತೆ ನಮ್ಮನ್ನು ಕಾಯುತ್ತದೆ (ಕೀರ್ತನೆ119:101).

16) “ದೇವರ ವಾಕ್ಯವು ಪ್ರತಿ ಶೋಧನೆಯಿಂದ ನಮ್ಮನ್ನು ತಪ್ಪಿಸುತ್ತದೆ (ಪ್ರಕಟನೆ3:10).

      ಏನೋ....ಎಲ್ಲರೂ ಹೇಳುತ್ತಿದ್ದಾರೆ ನಾನು ಹೇಳುತ್ತೇನೆ ಎಂದು ನಿನ್ನ ಲೋಪಗಳನ್ನು ಸರಿಪಡಿಸಿಕೊಳ್ಳದೆ ವಾಕ್ಯವನ್ನು ಬೋಧಿಸುವುದಕ್ಕಾಗಲಿ, ಗ್ರಂಥವನ್ನು ಕೈಯಲ್ಲಿ ಹಿಡಿಯುವುದಕ್ಕಾಗಲಿ ಸಾಹಸ ಮಾಡಿದರೆ, ಅಂಥವರಿಗೆ ಎಚ್ಚರಿಕೆ ಏನೆಂದರೆ.....

    ದುಷ್ಟರಿಗಾದರೋ ದೇವರು ಹೇಳುವದೇನೆಂದರೆ ನನ್ನ ವಿಧಿಗಳನ್ನು ಪಠಿಸುವದಕ್ಕೆ ನಿಮಗೇನು ಭಾಧ್ಯತೆ ಉಂಟು? ನನ್ನ ನಿಬಂಧನೆಯನ್ನು ಉಚ್ಚರಿಸಿವದು ನಿಮಗೇನು ಕೆಲಸ? ನೀವೋ ನನ್ನ ಸುಶಿಕ್ಷಣವನ್ನು ಹಗೆ ಮಾಡುತ್ತೀರಲ್ಲ; ನನ್ನ ಆಜ್ಞೆಗಳನ್ನು ಉಲ್ಲಂಘಿಸುತ್ತೀರಿ (ಕೀರ್ತನೆ50:16-17).

ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶ ಮಾಡುವ ನೀನು ನಿನಗೆ ಉಪದೇಶ ಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ?” (ರೋಮಾ2:21).
                                                                                                                                                                                                                                                              ಸಹೋ.ಈಶ್ವರ್

📖 :తెలుగు అంశము: 📖

Share this

Related Posts

Previous
Next Post »

www.kannada.cockm.in