ಮನೆ (House)     ಪರಿಶುದ್ಧರಾಗಿರುವುದಕ್ಕೆ ಕರೆಯಲ್ಪಟ್ಟಿರುವ ಎಲ್ಲರಿಗೂ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ವಂದನೆಗಳನ್ನ ಸಲ್ಲಿಸುತ್ತಿದ್ದೇನೆ.

    ಮನೆ ಅಂದರೆ ನಮಗೆ ಎರಡು ವಿಷಯಗಳು ನೆನಪಿಗೆ ಬರುತ್ತವೆ. ಒಂದು ಭೌತಿಕ ಸಂಬಂಧಪಟ್ಟ ಮನೆ ಇನ್ನೊಂದು ಆತ್ಮಕ್ಕೆ ಸಂಬಂಧಪಟ್ಟ ಮನೆ. ಆದರೆ, ಆತ್ಮ ಸಂಬಂಧಪಟ್ಟ ಮನೆ ಅಂದರೆ ಸಭೆ (1ಕೊರಿಂಥ3:9; ಗಲಾತ್ಯ6:10) ಕುರಿತು ನಾವು ಇದಕ್ಕಿಂತ ಮುಂಚೆ ಬರೆದಿರುವ ಅಂಶದ ಮೂಲಕ ತಿಳಿದು ಕೊಂಡಿದ್ದೇವೆ. ಆದರೆ ಸಮಯದಲ್ಲಿ ನಾವು ಭೌತಿಕ ಸಂಬಂಧಪಟ್ಟ ಮನೆಯನ್ನು ಕುರಿತು ತಿಳಿದುಕೊಳ್ಳೋಣ.

  ಕ್ರೈಸ್ತರಾದ ನಾವು ಪರಿಶುದ್ಧ ಗ್ರಂಥ ಹೇಳಿದ ಪ್ರಕಾರವಾಗಿ ಒಳ್ಳೆ ಕುಟುಂಬ ಅಥವಾ ದೇವರ ಮನೆಯಂತೆ  ಕಟ್ಟಲ್ಪಡುತ್ತಿದ್ದೇವಾ? ದೇವರಿಗೆ ಇಷ್ಟಾನುಸಾರವಾಗಿ ನಮ್ಮ ಕುಟುಂಬಗಳನ್ನು ನಮ್ಮ ಮನೆಯನ್ನು ಮುಂದಕ್ಕೆ ನಡೆಸುತ್ತಿದ್ದೇವಾ? ಒಬ್ಬ ಕ್ರೈಸ್ತವ ಕುಟುಂಬ ಹೇಗಿರಬೇಕು ಎಂದು ಸತ್ಯವೇದವನ್ನು ಪರಿಶೀಲನೆ  ಮಾಡುತ್ತಿದ್ದೇವಾ?

  ವಿಷಯಗಳನ್ನು ಆಲೋಚನೆ ಮಾಡಿ ನಮ್ಮ ಕುಟುಂಬಗಳನ್ನ ಅಥವಾ ಮನೆಗಳನ್ನ ಯಾವ ರೀತಿ ಇರಬೇಕು ಎಂದು ದೇವರು ಬಯಸುತಿದ್ದನೋ ಸತ್ಯವೇದದ ವಚನಗಳ ಆಧಾರವಾಗಿ ನೋಡಿ ನಮ್ಮ ಕುಟುಂಬಗಳನ್ನು ಬದಲಾಯಿಸಿಕೊಳ್ಳೋಣ.


 ಮನೆಯನ್ನು ಕುರಿತು ಪರಿಶುದ್ಧ ಗ್ರಂಥದ ವಿವರಣೆ.

A). ಕ್ರೈಸ್ತರಾದ ನಾವು, ನಮ್ಮ ಮನೆ ದೇವರಿಗೆ ಒಂದು ವ್ಯವಸ್ಥೆ  ಅಥವಾ ಏರ್ಪಾಟು ಎಂದು ಆತನು ಅದಕ್ಕೆ ಅಧಿಕಾರಿಯಾಗಿರುವನು ಎಂದು ಮೊದಲು ಗ್ರಹಿಸಿಕೊಳ್ಳಬೇಕು.

     ಏಕೆಂದರೆ ಆದಾಮನನ್ನು ನಿರ್ಮಾಣ ಮಾಡಿದ ದೇವರು ಮನುಷ್ಯನು ಒಬ್ಬಂಟಿಯಾಗಿರುವುದು ಒಳ್ಳೆಯದಲ್ಲ ಎಂದು ಯೋಚಿಸಿ ಹವ್ವಳನ್ನು ನಿರ್ಮಿಸಿ  ಅವರನ್ನ ಒಂದು ಕುಟುಂಬವಾಗಿ, ಒಂದು ಮನೆಯನ್ನಾಗಿ ಕಟ್ಟಿದನು.

ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು”( ಆದಿ 2: 7).

ಹೀಗಿರುವಲ್ಲಿ ಯೆಹೋವದೇವರು ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ ತಾನು ಮನುಷ್ಯನಿಂದ ತೆಗೆದಿದ್ದ ಎಲುಬನ್ನು ಸ್ತ್ರೀಯಾಗ ಮಾಡಿ ಆಕೆಯನ್ನು ಅವನ ಬಳಿಗೆ ಕರತಂದನು.”( ಆದಿ 2: 21 -22).


B)ಮನೆ ಕುಟುಂಬಸ್ಥರೊದಿಗೆ ಕೂಡಿರುವ ಒಂದು ವಿಭಾಗ. ಅದರ ಅಧಿಕಾರಿ ಪುರುಷನು ಅಥವಾ ಗಂಡನು ಆಗಿರುವನು.

ಆದಾಮನು (ಗಂಡ), ಅವ್ವಳು (ಹೆಂಡತಿ), ಕಾಯಿನನ್ನು, ಹೇಬೆಲನು (ಮಕ್ಕಳು)  etc… ( ಆದಿ 2:24; 4:1-2).


C). ಪ್ರತಿಯೊಂದು ಕುಟುಂಬದಲ್ಲಿ ಪುರುಷನು ನಾಯಕನಾಗಿರಬೇಕು ಹಾಗೆ ತನ್ನ ಹೆಂಡತಿಯನ್ನು, ಮಕ್ಕಳನ್ನು, ಸರಿಯಾದ ಪದ್ಧತಿಯಲ್ಲಿ ನಡೆಸಿಕೊಳ್ಳುವವನಾಗಿದ್ದು ದೇವರ ನಾಮವನ್ನು ಮಹಿಮೆಪಡಿಸಬೇಕು.

ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.”( ಎಫೆಸ 5: 23). 

ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥಿ 11: 3).

ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು. ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು? (1 ತಿಮೊಥೆ 3:4).


D).ಪ್ರತಿ ಒಂದು ಕುಟುಂಬವನ್ನು ಗಂಡ ತನ್ನ ಪೋಷಣೆ ಮಾಡುವವನಾಗಿರಬೇಕು. ಏಕೆಂದರೆ ಮೊದಲಿನಿಂದ ಪುರುಷರೇ ಕೆಲಸ ಮಾಡಿ ತಮ್ಮ ಕುಟುಂಬಗಳನ್ನ ಪೋಷಿಸುವವರಾಗಿ ಇದ್ದಾರೆ ಎಂದು ಗ್ರಂಥ ತಿಳಿಸುತ್ತದ್ದೆ.

ಯೆಹೋವದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು”. ( ಆದಿ 2:15).

ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆ 5: 8).


E).ಪ್ರತಿ ಮನೆಯಲ್ಲೂ ಗಂಡ ಹೆಂಡತಿಯನ್ನು ಪ್ರೀತಿಸುವವನಾಗಿರಬೇಕು. ಕ್ರಿಸ್ತನು ಹೇಗೆ ಸಭೆಯನ್ನು ಪ್ರೀತಿಸಿ ತನ್ನ ಶರೀರವನ್ನು ಅರ್ಪಿಸಿದನೋ ಹಾಗೆ ಗಂಡನು ಕೂಡ ತನ್ನ ಹೆಂಡತಿಯನ್ನು ಪ್ರೀತಿಸಬೇಕು.

ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು”( ಎಫೆಸ 5: 25).

ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ” (ಎಫೆಸ 5: 28).


F).ಪ್ರತಿ ಒಂದು ಮನೆಯಲ್ಲು ಹೆಂಡತಿ ಗೃಹನಿರ್ವಹಣೆ ಮಾಡುವವಳಾಗಿದ್ದು ಮನೆಯಿಂದಲೇ ಕೆಲಸ ಮಾಡುವವಳಾಗಿರಬೇಕು.

ಆದದರಿಂದ ಪ್ರಾಯದ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಯಜಮಾನಿಯರಾಗಿರುವದು ನನಗೆ ಒಳ್ಳೇದಾಗಿ ತೋಚುತ್ತದೆ; ಹಾಗೆ ಮಾಡುವದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು” (1 ತಿಮೊಥೆ 5:14).

ಹೇಗಂದರೆ ವೃದ್ಧರು ಮದ್ಯಾಸಕ್ತಿಯಿಲ್ಲದವರೂ ಗೌರವವುಳ್ಳವರೂ ಜಿತೇಂದ್ರಿಯರೂ ನಂಬಿಕೆ ಪ್ರೀತಿ ತಾಳ್ಮೆ ಇವುಗಳಲ್ಲಿ ಸ್ವಸ್ಥರೂ ಆಗಿರಬೇಕೆಂದು ಬೋಧಿಸು. ಹಾಗೆಯೇ ವೃದ್ಧಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಗುಲಾಮರೂ ಆಗಿರದೆ ದೇವ ಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಸದ್ಬೋಧನೆ ಹೇಳುವವರೂ ಆಗಿರಬೇಕೆಂದು ಬೋಧಿಸು. ಇದಲ್ಲದೆ ಅವರು ಪ್ರಾಯದ ಸ್ತ್ರೀಯರಿಗೆ-ನಿಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನೀವು ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೇ ಕೆಲಸಮಾಡುವವರೂ ಸುಶೀಲೆಯರೂ ನಿಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ಬುದ್ಧಿ ಕಲಿಸುವ ಹಾಗೆ ಬೋಧಿಸು..”( ತೀತನು 2:2-5).


G).ಪ್ರತಿ ಮನೆಯಲ್ಲೂ ಹೆಂಡತಿ ತನ್ನ ಗಂಡನಿಗೆ ಒಳಪಟ್ಟು ವಿಧೇಯತೆ ತೋರಿಸುವುದೇ ತನಗೆ ಅಲಂಕಾರ ಎಂದು ಎನಿಸಿಕೊಂಡು ಕುಟುಂಬದ ಎಲ್ಲ ವಿಷಯಗಳಲ್ಲಿ ಜಾಗ್ರತೆಯಿಂದ ಗಂಡನನ್ನು ಗೌರವಿಸಬೇಕು.

ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.” (ಎಫೆಸ 5:22).

ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ” (ಕೊಲೊಸ್ಸಿ 3:18).

ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದು ಯಾವ ಭೀತಿಗೂ ಗಾಬರಿಪಡದೆ ಒಳ್ಳೇದನ್ನೇ ಮಾಡುವವರಾಗಿದ್ದರು” (1 ಪೇತ್ರ 3: 5-6)

ಅದಿರಲಿ; ನಿಮ್ಮಲ್ಲಿ ಪ್ರತಿಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು”(ಎಫೆಸ 5:33).


H).ಗರ್ಭ ಫಲ ದೇವರು ಕೊಡುವ ಬಹುಮಾನವೂ ಆದದರಿಂದ ಪ್ರತಿ ಮನೆಯಲ್ಲೂ ತಂದೆ ತಾಯಿಯರು ತಮ್ಮ ಮಕ್ಕಳನ್ನು ದೇವರ ಜ್ಞಾನದಲ್ಲಿ ಬೆಳೆಸುವವರಾಗಿದ್ದು ಅವರಿಗೆ ಕೋಪವನ್ನು ಎಬ್ಬಿಸದೇ ಎಲ್ಲವನ್ನು ಒದಗಿಸುವವರಾಗಿರಬೇಕು.

ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭ ಫಲವು ಆತನ ಬಹುಮಾನವೇ” (ಕೀರ್ತನೆ 127: 3).
ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು” (ಧರ್ಮೋಪದೇಶಕಾಂಡ 6 :5 -7).

ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲ ಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ” (ಎಫೆಸ 6: 4).


I) ಪ್ರತಿ ಒಂದು ಮನೆಯಲ್ಲೂ ಮಕ್ಕಳು ಎಲ್ಲಾ ವಿಷಯದಲ್ಲಿ ತಮ್ಮ ತಾಯಂದಿರ ಮಾತು ಕೇಳುವವರಾಗಿ ವಿಧೇಯರಾಗಿರಬೇಕು.
ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ” (ಎಫೆಸ 6:1).

 ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ” (ಕೊಲೊಸ್ಸೆ 3:20).
  ಆದದರಿಂದ ಸಹೋದರರೇ.,

→ ಕ್ರೈಸ್ತವರಾದ ನಾವು ನಮ್ಮ ಮನೆ ಯಾವ ರೀತಿಯಲ್ಲಿ ಇದೆ?
→ ಗ್ರಂಥದಲ್ಲಿ ಹೇಳಿರುವ ಪ್ರಕಾರ ಪುರುಷನು ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾನಾ?
→ ನಿಮ್ಮ ಮನೆಯಲ್ಲಿ ಪುರುಷನು ಅಧಿಕಾರ ಮಾಡುತ್ತಿದ್ದಾನಾ?
→ ನಿನ್ನ ಹೆಂಡತಿ ಮನೆಯ ಜವಾಬ್ದಾರಿಗಳನ್ನು ನೆರವೇರಿಸಿ ಯಜವಾನನಿಗೆ ವಿಧೇಯಳಾಗಿದ್ದಾಳಾ?
→ ಮಕ್ಕಳು ದೇವರ ಕ್ರಮ ಶಿಕ್ಷಣದಲ್ಲಿ ಮತ್ತು ಜ್ಞಾನದಲ್ಲಿ ಬೆಳೆಯುತ್ತಿದ್ದಾರಾ ?.

    ಆಲೋಚನೆ ಮಾಡಿರಿ, ಗ್ರಂಥದಲ್ಲಿ ಹೇಳಿರುವ ಮಾತುಗಳನ್ನು ಪರಿಶೀಲನೆ ಮಾಡಿ ನಿಮ್ಮ ಕುಟುಂಬ ದೇವರಿಗೆ ವಿರೋಧವಾಗಿ ನಡೆಯುತ್ತಿದ್ದರೆ ಕ್ಷಣವೇ ನಿಮ್ಮ ಮನಸುಗಳನ್ನು ಮಾರ್ಪಡಿಸಿಕೊಂಡು ನಿಮ್ಮ ಕುಟುಂಬಗಳನ್ನು ಸರಿಯಾದ ದಾರಿಯಲ್ಲಿ ನಡೆಸಿ ದೇವರ ನಾಮವನ್ನು ಮಹಿಮೆ ಪಡಿಸಿ ದೇವರು ಕೊಡುವ ಎಲ್ಲ ಆಶೀರ್ವಾದಗಳನ್ನು ಹೊಂದಿಕೊಳ್ಳಿರಿ.

ವಂದನೆಗಳು 
ನಿಮ್ಮ ಆತ್ಮೀಯ.,
ಸಹೋ. ಈಶ್ವರ್

Share this

Related Posts

Previous
Next Post »

www.kannada.cockm.in