"ಎಂಥವರ ಸಾಂಗತ್ಯ ಮಾಡಬಾರದೆಂದು ಬೈಬಲ್ ಗ್ರಂಥ ಹೇಳುತ್ತದೆ ಗೊತ್ತೆ".? |
ಪರಿಶುದ್ಧರಾಗಿರುವುದಕ್ಕೆ ಕರೆಯಲ್ಪಟ್ಟವರೆಲ್ಲರಿಗೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ವಂದನೆಗಳು.
1) ದುಷ್ಟರ ಸಹವಾಸ ಮಾಡಬಾರದು ಕಾರಣವೇನೆಂದರೆ ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ (1ಕೊರಿಂಥ15:33).
2) ವೇಶ್ಯೆ ಸಹವಾಸ ಮಾಡಬಾರದು ಕಾರಣವೇನೆಂದರೆ ವೇಶ್ಯೆಯಿಂದ ಯಾವನಿಗಾದರು ಒಂದು ರೊಟ್ಟಿ ಮಾತ್ರ ಗತಿಯಾಗುವುದು (ಜ್ಞಾನೋಕ್ತಿ 6:26).
03) ದುರ್ಜನರ ಸಹವಾಸ ಮಾಡಬಾರದು ಕಾರಣವೇನೆಂದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ (ಕೀರ್ತನೆ 26:5)
04) ಕುಟಿಲ ಸ್ವಭಾವಿಗಳ ಸಾಂಗತ್ಯ ಮಾಡಬಾರದು (ಕೀರ್ತನೆ 26:4).
05) ಜ್ಞಾನಹೀನರ ಸಾಂಗತ್ಯ ಮಾಡಬಾರದು ಕಾರಣವೇನೆಂದರೆ ಕೆಟ್ಟು ಹೋಗುವರು (ಜ್ಞಾನೋಕ್ತಿ 13:20).
06) ಕ್ರಿಸ್ತನ ನಂಬಿಕೆಯಿಲ್ಲದವರ ಸಾಂಗತ್ಯ ಮಾಡಬಾರದು ಕಾರಣವೇನೆಂದರೆ ನಾವು ದೇವರಿಂದ ದೂರವಾಗಿ ಹೋಗುವೆವು (2ಕೊರಿಂಥ 6:14).
07) ಕೋಪಿಷ್ಟನ ಸಾಂಗತ್ಯ ಮಾಡಬಾರದು ಕಾರಣವೇನೆಂದರೆ ನಿನ್ನ ಪ್ರಾಣಕ್ಕೆ ಹಾನಿಯನ್ನು ತಂದು ಕೊಳ್ಳುವಿ (ಜ್ಞಾನೊಕ್ತಿ 22:24).
08) ಕೆಟ್ಟವರ ಸಾಂಗತ್ಯವನ್ನು ಬಯಸಬಾರದು (ಜ್ಞಾನೋಕ್ತಿ 24:1).
09) ತುಂಟರ ಸಾಂಗತ್ಯ ಮಾಡಬಾರದು ಕಾರಣವೇನೆಂದರೆ ಹೊಟ್ಟೆ ಬಾಕರ ಗೆಳೆಯನು ತಂದೆ ಮಾನವನ್ನು ಕಳೆಯುವನು (ಜ್ಞಾನೋಕ್ತಿ 28:7).
10) ದ್ರೋಹಿಗಳು ಕಳ್ಳರ ಸಾಂತ್ಯ ಮಾಡಬಾರದು (ಯೆಶಾಯ 1:23).
📖 ಬಹು ಮಂದಿ ಗೆಳೆಯರನ್ನು ಹೊಂದಿರುವುದು ಪ್ರಯೋಜನವೇ ? ಬೈಬಲ್ ಗ್ರಂಥವು ಏನು ಹೇಳುತ್ತದೆ?
● ಬಹು ಮಂದಿ ಗೆಳೆಯರನ್ನು ಸೇರಿಸಿಕೊಂಡವರಿಗೆ ನಾಶನ (ಜ್ಞಾನೋಕ್ತಿ 18:24).
● ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು; ಬಡವನಿಗೆ ಇದ್ದ ಸ್ನೇಹಿತನು ಅಗಲುವನು;(ಜ್ಞಾನೋಕ್ತಿ 19:4).
● ನಿಜ ಸ್ನೇಹಿತನ ಪ್ರೀತಿಯು ಆಪ್ತಕಾಲದಲ್ಲಿ ಸಾರ್ಥಕವಾಗುವುದು (ಜ್ಞಾನೋಕ್ತಿ 17:17)
📖ಕ್ರೈಸ್ತರಾದವರು ಎಂಥವರ ಸಹವಾಸ ಮಾಡಬಾರದೆಂದು ಬೈಬಲ್ ಗ್ರಂಥವು ತಿಳಿಸಿಕೊಡುತ್ತದೆ ಕ್ರೈಸ್ತನೆಂದೆಣಿಸಿಕೊಂಡವರಲ್ಲಿ ಯಾರಾದರು.
1. ವೆಭಿಚಾರಿ
2. ಲೋಭಿ
3. ವಿಗ್ರಹಾರಾಧಿಕನು
4. ಬೈಯುವವನು
5. ಕುಡಿಕನು
6. ದೋಚು ಕೊಳ್ಳುವವನು
ಇಂಥವರ ಜೊತೆ ಸಾಂಗತ್ಯ ಮಾಡಬಾರದು ಹಾಗೂ ಒಟ್ಟಿಗೆ ಊಟ ಮಾಡಲೂ ಬಾರದು ಎಂದು ಸತ್ಯವೇದವು ಹೇಳುತ್ತಿದೆ (1ಕೊರಿಂಥ5:11).
📖 "ಹಾಗದರೆ ಕ್ರೈಸ್ತರ ಸಹವಾಸ ಯಾರೊಂದಿಗಿರಬೇಕು"?
● ದೇವರೊಂದಿಗೆ (1ಯೋಹಾನ 1:3)
● ದೇವರ ಮಗನಾದ ಕ್ರಿಸ್ತನೊಂದಿಗೆ (1ಯೋಹಾನ 1:3)
● ಪವಿತ್ರಾತ್ಮನೊಂದಿಗೆ (2ಕೊರಿಂಥ 13:14)
● ಪರಿಶುದ್ಧರೊಂದಿಗೆ (ಅ.ಕೃ 2:42)
ಪರಿಶೋದಕನೆ....ನಿನ್ನ ಸಹವಾಸ ಯಾರೊಂದಿಗೆ.....?? ನಿನ್ನ ಸ್ನೇಹಿತರು ಯಾರು? ನಿನಗೆ ದೇವರ ಸಹಾಯ ಕೈಗೆಟಕುವ ದೋರದಲ್ಲಿಯೇ ಇದೆ ಎಂದು ಗ್ರಹಿಸಿಕೊ.
ವಂದನೆಗಳು
ಇಂತಿ ನಿಮ್ಮ ಆತ್ಮೀಯ.,
ಸಹೋ.ಈಶ್ವರ್