ನೀನು ನಿಜವಾಗಿ ರಕ್ಷಿಸಲಟ್ಟಿದ್ದಿಯಾ? (Are You Saved?)

ನೀನು ನಿಜವಾಗಿ ರಕ್ಷಿಸಲಟ್ಟಿದ್ದಿಯಾ?

  ಪರಿಶುದ್ಧರಗಿರುವುದಕ್ಕೆ ಕರೆಯಲ್ಪಟ ಪರಿಶುದ್ಧರೆಲ್ಲರಿಗೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನನ್ನ ವಂದನೆಗಳು.

   ಕ್ರಿಸ್ತನ ಮೂಲಕ ರಕ್ಷಿಸಲ್ಪಟ್ಟ ಅನೇಕ ಕ್ರೈಸ್ತರು ನಾವು ರಕ್ಷಿಸಲ್ಪಟ್ಟಿದ್ದೇವೆ ಎಂಬ ನಂಬಿಕೆ ಅವರಿಗೆ ಇಲ್ಲ. ಇನ್ನು ಕೆಲವರು ರಕ್ಷಿಸಲ್ಪಟ್ಟಿದ್ದೇವೆ ಎಂದು ನಂಬುವವರಾಗಿದ್ದಾರೆ. ಆದರೆ ತಪ್ಪುಗಳನ್ನು ಮಾಡುತ್ತಿದ್ದಾರೆ ರಕ್ಷಣೆಯನ್ನು ಕಳೆದುಕೊಳ್ಳುತ್ತಿದ್ದಾರೆ ಅಥವಾ ಬಿದ್ದು ಹೋಗುತ್ತಿದ್ದಾರೆ. ಸಹೋದರರೇ ಕ್ರೈಸ್ತರಾದ ನಾವು ದಿನದಲ್ಲಿ ಲೋಕದಲ್ಲಿ ನಮ್ಮ ದೇಹವನ್ನು ತ್ಯಜಿಸಿದರೂ ಕೂಡ ನಮ್ಮ ಆತ್ಮ ಖಂಡಿತವಾಗಿ ರಕ್ಷಿಸಲ್ಪಡುತ್ತದೆ ಎನ್ನುವ ನಂಬಿಕೆ ಇರಬೇಕು.

    ಸಹೋದರರೇ ತುಂಬಾ ಜನರು ರಕ್ಷಿಸಲ್ಪಟ್ಟರೂ ಅವರ ರಕ್ಷಣೆಯ ಬಗ್ಗೆ ಪೂರ್ಣವಾಗಿ ನಂಬಿಕೆ ಇಲ್ಲದೆ ದೇವರಿಂದ ತೊಲಗಿ ಹೋಗುತ್ತಿದ್ದಾರೆ ಸ್ವಂತ ಆಲೋಚನೆಗಳಿಗೆ ಪ್ರಾಮುಖ್ಯತೆ ನೀಡಿ ರಕ್ಷಣಾ ಭಾಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

    ದೇವರ ಮಾತುಗಳನ್ನು ಬಿಟ್ಟು ನಿನ್ನ ಆಲೋಚನೆಗಳ ಮೂಲಕ ಜೀವಿಸಿದರೆ ನೀನು ನಿನ್ನ ರಕ್ಷಣೆಯನ್ನು ಕಾಪಾಡಿಕೊಳ್ಳುವುದಿಲ್ಲ.
"ಮನುಷ್ಯ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ (ಜ್ಞಾನೋಕ್ತಿ 16:25).

"ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ" (ಮತ್ತಾಯ 7:13-14).

 "ಆದರೆ ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವದಕ್ಕೆ ವೇಷ ಹಾಕಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷ ಹಾಕಿಕೊಳ್ಳುವದು ದೊಡ್ಡದಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು" (2ಕೊರಿಂಥ 11:13-15).

 ಆದ್ದರಿಂದ ಪ್ರಿಯರೇ ತಂದೆಯಾದ ದೇವರ ಕೃಪೆ ಮೂಲಕ, ಕ್ರಿಸ್ತನ ಮೂಲಕ ರಕ್ಷಿಸಲ್ಪಟ್ಟ ನಾವು ದೇವರ ಮಾತುಗಳನ್ನು ಅನುಸರಿಸಿ ನಡೆಯಬೇಕಾಗಿರುತ್ತದೆ ಹೊರತು ನಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿ ಅಲ್ಲ.

ಲೋಕದಲ್ಲಿ ಕೆಲವರು ದೇವರ ಕೃಪೆಯಿಂದ ಸಮಸ್ತವನ್ನು ಹೊಂದಿದವರಾಗಿ ಎಲ್ಲವುದರಲ್ಲಿಯೂ ಎಲ್ಲವುಗಳನ್ನು ಜಯಿಸಿ ತಮ್ಮ ಜೀವಿತದಲ್ಲಿ ಕೆಲವು ಕಾಲದವರೆಗೆ ದೇವರ ಮೇಲೆ ಪೂರ್ತಿಯಾಗಿ ವಿಶ್ವಾಸವನ್ನು ಮುಂದುವರೆಸಿ ನಂತರ ತಮ್ಮ ಸ್ವಂತ ಆಲೋಚನೆಗಳಿಗೆ ಪ್ರಾಧಾನ್ಯತೆಯನ್ನು ನೀಡಿ ನಾಶನವಾದವರು ಸಹ ಇದ್ದಾರೆ.

1.ರಾಜನಾದ ಸೊಲೊಮೋನ
"ಇಸ್ರಾಯೇಲ್ ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಅವನು ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪ ಗೊಂಡು ಅವನಿಗೆ- ನೀನು ಪ್ರಕಾರ ಮಾಡಿ ನನ್ನ ವಿಧಿ ನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು" (1ಅರಸು 11:9-11).

2.ಅರಸನಾದ ಉಜ್ಜೀಯ
 ಆದರೆ ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು. ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಇತರ ಯಾಜಕರೂ ಅರಸನಾದ ಉಜ್ಜೀಯನ ಹಿಂದೆಯೇ ಹೋಗಿ ಅವನೆದುರಿಗೆ ನಿಂತು ಅವನಿಗೆಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟು ಹೋಗು; ನೀನು ದ್ರೋಹಿ. ಇದಕ್ಕಾಗಿ ದೇವರಾದ ಯೆಹೋವನಿಂದ ನಿನಗೆ ಮಾನವುಂಟಾಗಲಾರದು ಅನ್ನಲು ಧೂಪ ಹಾಕ ಬೇಕೆಂದು ಕೈಯಲಿ ಧೂಪಾರತಿಯನ್ನು ಹಿಡಿದಿದ್ದ ಉಜ್ಜೀಯನು ಕೋಪ ವುಳ್ಳವನಾದನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು ಯಾಜಕರೊಡನೆ ಸಿಟ್ಟಿನಿಂದ ಮಾತಾಡುತ್ತಿರುವಾಗ ಯಾಜಕರ ಸಮಕ್ಷಮದಲ್ಲಿ ಅವನ ಹಣೆಯಲ್ಲಿ ಕುಷ್ಠ ಹುಟ್ಟಿತು(2ಪೂರ್ವ ಕಾಲ ವೃತ್ತಾಂತ 26:16-19).

    ಪ್ರಿಯ ಸಹೋದರ ಸಹೋದರಿಯರೇ ರಕ್ಷಣೆ ಎನ್ನುವದು ದೇವರು ನಮಗೆ ಕೊಟ್ಟಿರುವ ದೊಡ್ಡ ಭಾಗ್ಯ. ದಿನದಲ್ಲಿ ಇಸ್ರಾಯೇಲರು ಇಂತಹ ದೊಡ್ಡ ಭಾಗ್ಯವನ್ನು, ರಕ್ಷಣೆಯನ್ನು ಹೊಂದಿದರು ಸಹ ದೇವರಿಗೆ ವಿರೋಧವಾಗಿ ಪಾಪವನ್ನು ಮಾಡಿ ಅರಣ್ಯದಲ್ಲಿ ಹತರಾದರು. ಮತ್ತು ನಮ್ಮ ಆತ್ಮೀಯ ಸ್ಥಿತಿ ಹೇಗಿದೆ?

   ನಾವು ಯಾವ ಯಾವ ಮಾರ್ಗದಲ್ಲಿ ನಡೆದು ಕೊಳ್ಳಬೇಕೋ, ಹೇಗೆ ಎಂತಹ ಜೀವಿತವನ್ನು ಜೀವಿಸಬೇಕೊ ಎಂಬುದನ್ನು ನಮ್ಮ ಆಲೋಚನೆಗಳಿಗೆ ನಮ್ಮ ತಂದೆಯಾದ ದೇವರ ಬಿಟ್ಟು ಬಿಟ್ಟಿದ್ದಾನೆ. ಆದರೆ ಪ್ರತಿ ವಿಷಯಗಳಿಗೂ ಅಂದರೆ ಒಳ್ಳೆದಕ್ಕಾಗಲಿ ಕೆಟ್ಟದಕ್ಕಾಗಲಿ ಪೂರ್ತಿಯಾದ ಅವಗಾಹನೆಯನ್ನು ಪರಿಶುದ್ಧ ಗ್ರಂಥದ ಮೂಲಕ ತಿಳಿಯಾಡಿಸಲಾಗಿದೆ. ಯ್ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೋ ಅದು ನಮ್ಮ ವ್ಯಕ್ತಿಗತ ವಿಷಯವಾಗಿದೆ.


ನಮ್ಮ ಮುಂದೆ ಇರುವ ಎರಡು ಮಾರ್ಗಗಳು

1. ಪರಲೋಕದಲ್ಲಿ ನಿತ್ಯ ಸಂತೋಷ

 "ತರುವಾಯ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶ ಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ. ಇದಲ್ಲದೆ ಪರಿಶುದ್ಧ ಪಟ್ಟಣವಾದ ಹೊಸ ಯೆರುಸಲೇಮು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುವದನ್ನು ಕಂಡೆನು; ಅದು ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. ಇದಲ್ಲದೆ ಸಿಂಹಾಸನದೊಳಗಿA ಬಂದ ಮಹಾ ಶಬ್ದವು ನನಗೆ ಕೇಳಿಸಿತು ಅದು -ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರ ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿದನು" (ಪ್ರಕಟಣೆ 21:1-4).


2. ಪಾತಾಳ ನಿತ್ಯವೇದನೆ

 "ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು" (ಪ್ರಕಟಣೆ 21:8).

  ಎರಡು ಮಾರ್ಗಗಳಲ್ಲಿ ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೊ ಅದು ನಮ್ಮ ಆಲೋಚನೆಗೆ ಬಿಟ್ಟಿದ್ದಾನೆ. ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಂಡರೂ ಮಾರ್ಗಕ್ಕೆ ಅನುಗುಣವಾಗಿ ಪ್ರತಿಫಲವನ್ನು ಖಂಡಿತವಾಗಿ ಅನುಭಾವವಿಸುತ್ತೇವೆ ಅದು ನಿತ್ಯ ಸ್ವರ್ಗ ಆಗಿರಬಹುದು ಇಲ್ಲ ನಿತ್ಯ ನರಕವಾದರೂ ಆಗಿರಬಹುದು.

    ಪ್ರಿಯರೇ, ದೇವರು ತನ್ನ ಪರಿಶುದ್ಧ ಗ್ರಂಥದಲ್ಲಿ ತುಂಬಾ ಮಹತ್ವದ ಮಾತುಗಳನ್ನು ನಮಗೆ ತಿಳಿಸಿದ್ದಾನೆ ದೇವರ ಪರಿಶುದ್ಧ ಗ್ರಂಥದಲ್ಲಿ ವಿವಾಹದ ಮಹತ್ವವನ್ನು ಕುರಿತು ಹೇಳುತ್ತಾ ಪುರುಷನಿಗೆ ಅಧಿಕಾರವನ್ನು ಕೊಟ್ಟಿದ್ದಾನೆ, ಸ್ತ್ರೀ ಪುರುಷನಿಗೆ ಒಳಪಟ್ಟಿರಬೇಕೆಂದು ತಿಳಿಸಿದ್ದಾನೆ. ಅಂದರೆ ಭೌತಿಕ ಸಂಭಂದವಾದ ಜೀವನಕ್ಕೆ ಸಂಭಸಿದಂತೆ ಯಾವ ವಿಷಯವಾದರೂ ಪುರುಷನ ಆಲೋಚನೆಗೆ ಪ್ರಾಮುಖ್ಯತೆ ಕೊಡಬೇಕು ಎಂದು ಮಾತಿನ ಅರ್ಥವಾಗಿದೆ. ಹಾಗೆನೆ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಹೊಂದಿ, ರಕ್ಷಣೆ ಹೊಂದಿ, ಆತನ ಸಭೆಯೊಳಗೆ ಸೇರಿಸಲ್ಪಟ್ಟ ನಾವು ಕ್ರಿಸ್ತನಿಗೆ ಪ್ರಧಾನ ಮಾಡಲ್ಪಟ್ಟವರಾಗಿದ್ದೇವೆ ಆದ್ದರಿಂದ ಆತನ ಮಾತುಗಳಿಗೆ, ಆತನ ಆಲೋಚನೆಗಳಿಗೆ ಪ್ರಾಧಾನ್ಯತೆ ನೀಡುವವರಾಗಿದ್ದೇವೆ ಎಂಬುದನ್ನು ದೃಢವಾಗಿ ವಿಶ್ವಾಸಿಸಬೇಕು.

ನಮ್ಮ ರಕ್ಷಣೆಯ ವಿಷಯದಲ್ಲಿ ನಮಗೆ ನಂಬಿಕೆ ಇರಬೇಕು. ನಮ್ಮ ಸ್ವಂತ ಆಲೋಚನೆಗಳ ಮೇಲೆ ಅಲ್ಲ, ದೇವರ ಆಲೋಚನೆಗಳಿಗೆ ಅವಕಾಶವನ್ನು ಕೊಡುಬೇಕು.

 "ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧರಾಗುವದೇ ನಿಮಗೆ ಫಲ; ಕಡೆಗೆ ದೊರೆಯುವಂಥದು ನಿತ್ಯಜೀವ. ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ" (ರೋಮ 6:22-2).

 "ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ರಕ್ಷಣೆಯು ನಿಮ್ಮಿಂದುAಟಾದದ್ದಲ್ಲ, ಅದು ದೇವರ ವರವೇ ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ. ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇಮಿಸಿದನು" (ಎಫೆಸ 2:8-10).

 ನೀನು ನಿಜವಾಗಿ ರಕ್ಷಿಸಲ್ಪಟ್ಟಿದ್ದೇನೆ ಎಂದು ಖಂಡಿತವಾಗಿ ನಂಬಿದರೆ ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ನಿತ್ಯ ಜೀವವನ್ನು ಹೊಂದಿವಿ. ನಂಬುವುದು ನಿನ್ನಿಂದಾದರೆ ನಂಬುವವನಿಗೆ ಸಮಸ್ತವೂ ಸಾಧ್ಯವೆ. ಆಲೋಚನೆ ಮಾಡು! ನಿನ್ನ ನಡತೆಗಳನ್ನು ಸರಿಪಡಿಸಿಕೊ!

ವಂದನೆಗಳು
ಇಂತಿ ನಿಮ್ಮ ಆತ್ಮೀಯ.,
ಸಹೋ.ಈಶ್ವರ್

Share this

Related Posts

Previous
Next Post »

www.kannada.cockm.in