ರಕ್ಷಣೆ (Salvation)


  ರಕ್ಷಣೆ  (Salvation)


    ಕ್ರಿಸ್ತನು ಮತ್ತು ಸತ್ಯವನ್ನು ಅಂಗೀಕರಿಸಿ, ದೇವರ ಚಿತ್ತಾನುಸಾರವಾಗಿ ನಡೆಯಬೇಕೆಂದು ಆಸಕ್ತಿಯೊಂದಿಗೆ ಕ್ರಿಸ್ತನ ಸಭೆಯಲ್ಲಿ ಸೇರಿಕೊಳ್ಳಬೇಂದು ಹಂಬಲಿಸುತ್ತಿರುವ ಸಹೋದರಿ, ಸಹೋದರರಿಗೆ ನನ್ನ ವಂದನೆಗಳು.

    ಲೋಕದಲ್ಲಿ ರಕ್ಷಣೆ ಎಂದರೆ ಅನೇಕ ವಿಧವಾದ ಅರ್ಥಗಳನ್ನು ನಾವು ನೋಡುತ್ತೇವೆ. ಆದರೆ ನಿಜವಾದ ರಕ್ಷಣೆ ಮತ್ತು ಸರ್ವ ಜನರು ರಕ್ಷಣೆ ಹೊಂದುವುದಕ್ಕೆ ಇರುವ ಏಕೈಕ ಮಾರ್ಗವು ಯೇಸು ಕ್ರಿಸ್ತನ ಮುಖಾಂತರನೆ ದೊರೆಯುತ್ತದೆ ಎಂದು ಮೊದಲು ಗ್ರಹಿಸಬೇಕು. ನಮ್ಮ ತಂದೆಯಾದ ದೇವರು ನಮ್ಮನ್ನು ಪ್ರೀತಿಸುವವನಾಗಿದ್ದಾನೆ. ತನ್ನ ಮಕ್ಕಳಾದ ನಾವು ಪಾಪಕ್ಕೆ ದಾಸರಾಗದಂತೆ, ನಿತ್ಯಜೀವವನ್ನು ಕಳೆದು ಕೊಳ್ಳಬಾರದೆಂದು, ನರಕವೆಂಬ ಭಯಂಕರವಾದ ವೇದನೆಯುಳ್ಳ ಸ್ಥಳಕ್ಕೆ ನಾವು ಹೋಗಬಾರದೆಂದು ಬಯಸುತ್ತಿದ್ದಾನೆ. ಆದ್ದರಿಂದ ತಂದೆ ತನ್ನ ಬಳಿ ವಾಕ್ಯವಾಗಿದ್ದ ದೇವರನ್ನು ಕ್ರಿಸ್ತನನ್ನಾಗಿ ಲೋಕಕ್ಕೆ ಕಳುಹಿಸಿದನು. ಮಗನ ಮುಖಾಂತರ ಶಿಲುಬೆ ಮರಣದ ಮೂಲಕ ನಮಗೆ ವಿಮೋಚನೆ ಅಂದರೆ ಪಾಪ ಕ್ಷಮಾಪಣೆಯನ್ನುಂಟು ಮಾಡಿದ್ದಾನೆ.

ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು” ( ಮತ್ತಾಯ 1:21).

ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವದು ಅಪರೂಪ. ಉಪಕಾರಿಗೋಸ್ಕರ ಪ್ರಾಣಕೊಡುವದಕ್ಕೆ ಯಾವನಾದರೂ ಧೈರ್ಯ ಮಾಡಿದರೂ ಮಾಡಾನು. ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ. ದೇವರಿಗೆ ವೈರಿಗಳಾಗಿದ್ದ ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿರಲಾಗಿ ಆತನ ಕೂಡ ಸಮಾಧಾನವಾದ ನಮಗೆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ. ಇಷ್ಟು ಮಾತ್ರವೇ ಅಲ್ಲದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಸಮಾಧಾನಸ್ಥಿತಿ ಹೊಂದಿದವರಾಗಿ ಆತನ ಮುಖಾಂತರ ದೇವರಲ್ಲಿ  ಹರ್ಷಗೊಳ್ಳುತ್ತೇವೆ”  (ರೋಮಾ 5:6-11).

ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿ ಬರುತ್ತದೆ”  (1 ಯೋಹನು 4:10).

ಇಂತಹ ವಿಮೋಚನೆಯನ್ನು ನೀನು ಬಯಸುವುದಾದರೆ,ನಿತ್ಯಜೀವವನ್ನು ಹೊಂದಲು ಅಸೆ ಪಡುತ್ತಿದ್ದಾರೆ. ಆತನ ಮಾರ್ಗವನ್ನು ತಿಳುಕೊಳ್ಳಬೇಕು.


 ರಕ್ಷಣೆ ಹೊಂದುವುದಕ್ಕೆ ಐದು ಮಾರ್ಗಗಳು:

1ಕೇಳಬೇಕು

 ಮೊದಲು ಯೇಸು ಕ್ರಿಸ್ತನನ್ನು ಕುರಿತಾದ ಸುವಾರ್ತೆ ಕೇಳಬೇಕು.

ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ” (ರೋಮಾ 10:17).
ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು” (ಮತ್ತಾಯ 28:20).

ನಾವು ಪ್ರಕಟಿಸಿರುವ ಸುವಾರ್ತೆಯನ್ನು ನಂಬಿ ಕ್ರಿಸ್ತನು ನಮ್ಮ ಪಾಪಗಳ ನಿಮಿತ್ತ್ತವಾಗಿ ಮರಣಿಸಿದನು, ಮೂರನೇ ದಿನದಲ್ಲಿ ಪುನರುತ್ಥಾನನಾದನು ಎಂಬ ಉಪದೇಶವನ್ನು ಗಟ್ಟಿಯಾಗಿ ಹಿಡುದು ಕೊಳ್ಳಬೇಕು.

ಸಹೋದರರೇ,ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿದಿರಿ, ಅದರಲ್ಲಿ ನಿಂತಿದ್ದೀರಿ.ನಾನು ಯಾವ ಸಂಗತಿಯನ್ನು ಹೇಳಿ ನಿಮಗೆ ಸುವಾರ್ತೆಯನ್ನು ತಿಳಿಸಿದೆನೋ ನೀವು ಅದನ್ನು ಗಟ್ಟಿಯಾಗಿ ಹಿಡುಕೊಂಡರೆ ಮತ್ತು ನಿಮ್ಮ ನಂಬಿಕೆಯು ನಿರಾಧಾರವಾಗದ ಪಕ್ಷಕ್ಕೆ ಸುವಾರ್ತೆಯಿಂದ ನಿಮಗೆ ರಕ್ಷಣೆಯಾಗುತ್ತದೆ. ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು” (1 ಕೊರಿಂಥ 15:1-4).

ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? ಆದ್ದರಿಂದ ಸಹೋದರಿ, ಸಹೋದರ ರಕ್ಷಣೆ ಹೊಂದಬೇಕಾದರೆ ನೀವು ಖಂಡಿತವಾಗಿ ಶಿಲುಬೆಗೆ ಹಾಕಲ್ಪಟ್ಟ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೇಳಬೇಕು (ರೋಮಾ 10:14).


2. ನಂಬಬೇಕು

   ನೀವು ರಕ್ಷಣೆ ಹೊಂದಬೇಕಾದರೆ ಯೇಸು ಕ್ರಿಸ್ತನು ಸರ್ವೋನ್ನತನಾದ ದೇವರ ಮಗನೆಂದು ನಂಬಬೇಕು.

 ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು” (ಮತ್ತಾಯ 16:16)
ಯೇಸು ದೇವರ ಮಗನು ಎಂದು ನಂಬಿದರೇನೇ ನಮ್ಮ ಪಾಪಗಳ ವಿಷಯದಲ್ಲಿ ಸಾಯುತ್ತೇವೆ ಎಂದು ತಿಳಿದು ಕೊಳ್ಳಬೇಕು.

ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ  ಸಾಯುವಿರೆಂದು ನಿಮಗೆ ಹೇಳಿದೆನು; ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ಹೇಳಿದನು” (ಯೋಹನು 8:24).

ರಕ್ಷಣೆ ಹೊಂದಬೇಕಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ಇರಿಸಬೇಕು.

ಕರ್ತನಾದ ಯೇಸು ಕ್ರಿಸ್ತನನ್ನು ನಂಬು ಆಗ ನೀನು ನಿನ್ನ ಮನೆಯವರು ರಕ್ಷಣೆ ಹೊಂದುವಿರಿ ಎಂದು ಹೇಳಿ ಆತನಿಗೆ ಆತನ ಮನೆಯಲ್ಲಿರುವವರೆಲ್ಲರಿಗೂ ದೇವರ ವಾಕ್ಯವನ್ನು ಭೋದಿಸಿದರು-( .ಕೃ 16:30-32).

ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು (ಮಾರ್ಕ 16:16).

ಆದ್ದರಿಂದ ಪ್ರಿಯರೆ, ರಕ್ಷಣೆ ಹೊಂದಬೇಕಾದರೆ ಮೊದಲು ಕೇಳಬೇಕು ಅದಾದ ನಂತರ ಕೇಳಿದ್ದನ್ನು ನಂಬ ಬೇಕು.


3. ಮಾನಸಾಂತರ ಹೊಂದಬೇಕು

ಮೂರನೆಯದಾಗಿ ನೀನು ಕೇಳಿದ ವಿಷಯಗಳನ್ನೆಲ್ಲ ನಂಬಿದ ನಂತರ, ಇದಕ್ಕಿಂದ ಮುಂಚೆ ನೀನು ಮಾಡಿದ  ಪ್ರತಿ ಪಾಪಗಳ ವಿಷಯದಲ್ಲಿ ಮಾನಸಾಂತರವನ್ನು, ದೇವರ ಎದುರಿನಲ್ಲಿ ಪಶ್ಚತ್ತಾಪ ಪಡಬೇಕು.

ಅಜ್ಞಾನಕಾಲಗಳನ್ನು ದೇವರು ಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆ ಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು (.ಕೃ 17:30-31).

ಪಾಪ ಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮು ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ” (ಲೂಕ 24:17).
ದೇವರ ಚಿತ್ತಾನುಸಾರವಾಗಿರುವ ದುಃಖವು ಮಾನಸಾಂತರವನ್ನುಂಟುಮಾಡಿ ರಕ್ಷಣೆಗೆ ಕಾರಣವಾಗಿದೆ; ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ. (2 ಕೊರಿಂಥ 7:10).

ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗುನೆಟ್ಟಂತಾಗಿ ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ - ಸಹೋದರರೇ, ನಾವೇನು ಮಾಡಬೇಕು ಎಂದು ಕೇಳಲು ಪೇತ್ರನು ಅವರಿಗೆ - ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ” (.ಕೃ 2:37-38).

ಆದ್ದರಿಂದ ಪ್ರಿಯರೆ ನೀನು ಕೇಳಿದ ವಿಷಯಗಳನ್ನು ನಂಬ ಬೇಕು, ನೀನು ಮಾಡಿದ ಪಾಪಗಳ ವಿಷಯದ ನಿಮಿತ್ತ ಮಾನಸಾಂತರ ಹೊಂದಬೇಕು.


 4.ಒಪ್ಪಿಕೊಳ್ಳಬೇಕು

 ಮೇಲೆ ಹೇಳಿರುವ ಎಲ್ಲಾ ವಿಷಯಗಳಿಗಿಂತ ಇದು ಬಹು ಮುಖ್ಯವಾದದ್ದು ಯಾಕೆಂದರೆ ದಿನದಲ್ಲಿ ಅನೇಕ ಕ್ರಿಸ್ತರು ಕ್ರಿಸ್ತನನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ಸರಿಯಾದ ಅವಗಾಹನೆ ಇಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ.

 ಯೇಸು ಕ್ರಿಸ್ತನು ದೇವರ ಮಗನೆಂದು ಒಪ್ಪಿಕೊಳ್ಳಬೇಕು.

ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು” (ಮತ್ತಾಯ 16:16)

 ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು (ಮತ್ತಾಯ 10:32). ಎಲವುದಕ್ಕಿಂತ ಮುಖ್ಯವಾಗಿ ಕ್ರಿಸ್ತನು ತನ್ನ ಒಂದು ಸಭೆಯನ್ನು ನಿರ್ಮಿಸಿದನೆಂದು ಸಭೆಯ ಮೂಲಕನೇ ನಿತ್ಯ ಜೀವಹೊಂದುತ್ತೇವೆ ಎಂದು, ಸಭೆ ಕ್ರಿಸ್ತನ ಸಭೆ (Church of Christ) ಎಂದು ಒಪ್ಪಿಕೊಳ್ಳಬೇಕು.

ಮತ್ತು ನಾನೂ ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೇನಂದರೆ - ನೀನು ಪೇತ್ರನು, ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು” (ಮತ್ತಾಯ 16:18).

ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು”( .ಕೃ 4:12).

ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ” (1ಕೊರಿಂಥ 3:11).

ಸಭೆಯು ಆತನ ದೇಹವಾಗಿದೆ; ಎಲ್ಲವನ್ನೂ ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆ ಯುಳ್ಳದ್ದಾಗಿದೆ” (ಎಫೆಸ 1:23).

ಸಭೆಯೆಂಬ ದೇಹಕ್ಕೆ ಆತನು ಶಿರಸ್ಸು; ಆತನು ಆದಿಸಂಭೂತನು. ಎಲ್ಲಾದರಲ್ಲಿ ಪ್ರಮುಖನಾಗುವಂತೆ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ” (ಕೊಲೊಸ್ಸೆ 1:18).

ನೀನು ರಕ್ಷಿಸಲ್ಪಡಬೇಕಾದರೆ ಯೇಸು ಕ್ರಿಸ್ತನು ಕರ್ತನೆಂದು ನಿನ್ನ ಬಾಯಿಯ ಮುಖಾಂತರ ಒಪ್ಪಿಕೊಂಡು, ದೇವರು  ಆತನನ್ನು ಸತ್ತವರೊಗಳಿಂದ ಎಬ್ಬಿಸಿಸನೆಂದು ನಂಬಬೇಕು.

ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಅನ್ನುತ್ತದೆ. ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. ಅದೇನಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ” (ರೋಮಾ 10:8-10).


5.ದೀಕ್ಷಾಸ್ನಾನ ಹೊಂದಬೇಕು

 ಪ್ರಿಯ ಸಹೋದರ, ಸಹೋದರಿ ಯೇಸು ಕ್ರಿಸ್ತನ ಸುವಾರ್ತೆಯನ್ನು ಕೇಳಿದ ನೀನು ಆತನ ಮಾತುಗಳನ್ನು ನಂಬಬೇಕು, ನಿನ್ನ ಪಾಪಗಳ ನಿಮಿತ್ತ ಮಾನಸಾಂತರ ಹೊಂದಬೇಕು, ಯೇಸು ಕ್ರಿಸ್ತನನ್ನು ಒಡೆಯನೆಂದು ನಿನ್ನ ಬಾಯಿಯ ಮುಖಾಂತರ ಒಪ್ಪಿಕೊಂಡರೆ ಇವೆಲ್ಲವೂ ಮಾಡಿದ ನಂತರ ನೀನು ಕ್ರಿಸ್ತನು ಸ್ವರಕ್ತವನ್ನು ಕೊಟ್ಟು ಸಂಪಾದಿಸಿಕೊಂಡಿರುವ ಒಂದು ಸಭೆಯಲ್ಲಿ ಅಂದರೆ ಕ್ರಿಸ್ತನ ಸಭೆಯಲ್ಲಿ (Church of Christ) ಸೇರಬೇಕಾದರೆ ಖಂಡಿತವಾಗಿ ದೀಕ್ಷಾಸ್ನಾನ ಹೊಂದಬೇಕು.
ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು (ಮಾರ್ಕ 16:16).

ಪೇತ್ರನು ಅವರಿಗೆ - ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ; (.ಕೃ 2:38).

ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ಹೊಸಬರಾಗಿ ನಡಕೊಳ್ಳಬೇಕು” (ರೋಮಾ 6:3-4).

ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ” (ಕೊಲೊಸ್ಸೆ 3:12).

ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ” (1 ಪೇತ್ರ 3:12).

ಗಮನಿಸಿ: ವಿಷಯದ ಮೇಲೆ ಪೂರ್ತಿಯಾಗಿ ಅವಗಾಹನೆಗೆ ದೀಕ್ಷಾಸ್ನಾನ ಎಂದರೇನು? ದೀಕ್ಷಾಸ್ನಾನ ಹೇಗೆ ತೆಗೆದು ಕೊಳ್ಳಬೇಕು? ಯಾಕೆ ತೆಗೆದುಕೊಳ್ಳಬೇಕು? ದೀಕ್ಷಾಸ್ನಾನವನ್ನು ಯಾರ ಹೆಸರಿನ ಮೇಲೆ ತೆಗೆದು ಕೊಳ್ಳಬೇಕು ? ಎಂಬ ಅನೇಕ ವಿಷಯಗಳನ್ನು ನೋಡಿರಿ

ಯಾರು  ಮೇಲಿನ ಎಲ್ಲಾ ವಿಷಯಗಳನ್ನು ಗ್ರಹಿಸುತ್ತಾರೋ ಅವರು ದೇವರ ಮಗನು ಸ್ಥಾಪಿಸಿದ ಕ್ರಿಸ್ತನ ಸಭೆಯಲ್ಲಿ (Church of Christ ) ಸೇರಿಸಲ್ಪಡುತ್ತಾರೆ.

ಅವರು ದಿನಾಲು ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ ಸರಲ ಹೃದಯದಿಂದಲೂ ಊಟಮಾಡುತ್ತಾ ಇದ್ದರು;ದೇವರನ್ನು ಕೊಂಡಾಡುವವರಾಗಿಯೂ ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು” (.ಕೃ 2:46-47).

ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವ ಸ್ಥಿತಿ ಹೋಗಿ ಎಲ್ಲಾ ನೂತನವಾಯಿತು” (2 ಕೊರಿಂಥ 5:17).

ಆದ್ದರಿಂದ ಪ್ರಿಯರೇ ನೀವು ಕ್ರಿಸ್ತನ ಸಭೆಯಲ್ಲಿ (Church of Christ) ಸೇರಿಸಲ್ಪಟ್ಟಿದ್ದೀಯಾ?, ನಿತ್ಯ ಜೀವವನ್ನು ಹೊಂದುವುದಕ್ಕೆ ಸಿದ್ಧನಾಗಿದ್ದೀಯಾ? ಆಲೋಚನೆ ಮಾಡು, ರಕ್ಷಣೆ ಹೊಂದು!

ಈಗಲೇ ಸುಪ್ರಸನ್ನತೆಯಕಾಲ; ಇದೇ ರಕ್ಷಣೆಯ ದಿನ (2 ಕೊರಿಂಥ 6:2).

 ವಂದನೆಗಳು

Share this

Related Posts

Previous
Next Post »

1 comments:

comments
April 10, 2022 at 1:42 PM delete

IGT Gaming, Casinos, and Games for sale in Maricopa
Find your complete list 바카라 사이트 of 바카라사이트 casinos, apr casino games and ventureberg.com/ games at IGT Gaming in Maricopa, Arizona. 1. Casinos 토토 in Casino at Residence

Reply
avatar

www.kannada.cockm.in